ಕರ್ನಾಟಕ ಸಂಗೀತ ವಿಷಯ ವಿಶ್ವಕೋಶ, ಸಂಪುಟ-3

Author : ವಿ.ಎಸ್. ಸಂಪತ್ಕುಮಾರಾಚಾರ್ಯ

Pages 484

₹ 425.00




Year of Publication: 2012
Published by: ಡಿ.ವಿ.ಕೆ. ಮೂರ್ತಿ
Address: ಮೈಸೂರು

Synopsys

ಕರ್ನಾಟಕ ಸಂಗೀತ ವಿಷಯ ವಿಶ್ವಕೋಶ - ಸಂಪುಟ - 3 `ಲ-ಹ`ಕಾರ (ಸಂಗೀತ ಪುಸ್ತಕ)-ಎಂಬುದು ಹಿರಿಯ ಲೇಖಕ ಡಾ. ವಿ.ಎಸ್. ಸಂಪತ್ಕುಮಾರಾಚಾರ್ಯ ಅವರು ರಚಿಸಿದ ಕೃತಿ. ಸಂಗೀತದ ಪ್ರಾಥಮಿಕ ಜ್ಞಾನ ಕುರಿತ ವಿಷಯವನ್ನು ಒಳಗೊಂಡ ಕೃತಿ. ಸಂಗೀತ ಅಭ್ಯಾಸಿಗಳಿಗೆ  ಉಪಯುಕ್ತ.

About the Author

ವಿ.ಎಸ್. ಸಂಪತ್ಕುಮಾರಾಚಾರ್ಯ
(01 October 1925)

ವಿ.ಎಸ್. ಸಂಪತ್ಕುಮಾರಾಚಾರ್ಯ ಮೈಸೂರು ಜಿಲ್ಲೆಯ ಚಾಮರಾಜ ತಾಲ್ಲೂಕಿನ ವೆಂಕಟಯ್ಯನ ಛತ್ರ ಅಗ್ರಹಾರದವರು.ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎ. (ಆನರ್ಸ್) ಬಿ.ಎಡ್‌. ರಾಷ್ಟ್ರಭಾಷಾ ವಿಶಾರದ ಹಾಗೂ ಕಾಶಿಯ ಹಿಂದೂ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವೀಧರರು. ‘ಹೊಯ್ಸಳ ಯುಗದ ಜನಜೀವನ’ ಎಂಬುದು ಮೈಸೂರು ವಿಶ್ವವಿದ್ಯಾಲಯಕ್ಕೆ ಸಲ್ಲಿಸಿ, ಪಿಎಚ್ ಡಿ  ಪಡೆದ ಮಹಾಪ್ರಬಂಧ.  ತಮಿಳುನಾಡಿನ ಪ್ರೌಢಶಾಲೆಯೊಂದರಲ್ಲಿ ಶಿಕ್ಷಕರಾದರು. ಕರ್ನಾಟಕ ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ ನಿವೃತ್ತರಾದರು. ಸಂಗೀತ ಸಾಹಿತ್ಯ ಕ್ಷೇತ್ರದಲ್ಲೂ ಇವರ ಆಸಕ್ತಿ.  ಕೃತಿಗಳು: ಸಂಗೀತ ಮತ್ತು ಅದರ ಇತಿಹಾಸ ವಾದ್ಯಗಳು, ನಾನಾ ನೃತ್ಯ ಪ್ರಕಾರಗಳು, ಶಾಸ್ತ್ರ ಗ್ರಂಥಗಳು, ಸಂಗೀತಜ್ಞರು, ಸಂಗೀತಗಾರರು ಮುಂತಾದ ನಾನಾ ವಿವರಣೆಗಳು ಒಳಗೊಂಡ ವಿಶ್ವಕೋಶದಂತಿರುವ ...

READ MORE

Related Books