ಸಮಾಜದಲ್ಲಿ ಮೊಣಕಾಲ ಮೇಲೆ ಶಾಲುಹಾಕಿಕೊಂಡು ಎರಡು ಬೈಠಕ್‌ಗಳಲ್ಲಿ ಹಾಡಿದವರೆಲ್ಲ ಪಂಡಿತ ಎಂದಾದರೆ ದಯವಿಟ್ಟು ನನ್ನನ್ನು ಪಂಡಿತ ಎಂದು ಕರೆಯಬೇಡಿ' ನಾವೇಕೆ ಪಂಡಿತ ಎನ್ನಿಸಿಕೊಂಡು ಕೆಳಮಟ್ಟಕ್ಕಿಳಿಯಬೇಕು?' ಇದು ಪಂಡಿತ ಶಬ್ದದ ಅಪಮೌಲ್ಯ ಮತ್ತು ತಮ್ಮ ಸಂಗೀತ ವಿದ್ವತ್ತಿನ ಬಗ್ಗೆ ಅವರಿಗಿದ್ದ ಆತ್ಮವಿಶ್ವಾಸದ ಸೂಚಕ, ಸಂಗೀತ ಲೋಕದ ಖ್ಯಾತ ಗಾಯಕರಿಗೆ ಸಂಬಂಧಿಸಿದ ಇಂಥ 29 ಸವಿನೆನಪುಗಳ ಘಟನೆಗಳನ್ನು ಶಿರೀಷ ಜೋಶಿ ಸಂಗ್ರಹಿಸಿದ್ದಾರೆ.ಸಂಗೀತ ವಿದ್ವಾಂಸರ ಸ್ವಾಭಿಮಾನ, ಸಣ್ಣತನ, ದೊಡ್ಡತನ, ಅಹಂಗಳು ಇಲ್ಲಿವೆ. ಸವಾಯಿ ಗಂಧರ್ವ, ಕುಮಾರ ಗಂಧರ್ವ, ಮೋಗು ಬಾಯಿ ಕುರ್ಡಿಕರ್, ಲತಾ ಮಂಗೇಶ್ವರ್, ಉಸ್ತಾದ ಸಿಂದೇಖಾನ್, ಪಂ.ಬಾಳಕೃಷ್ಣ ಬುವಾ, ಪರವೀನ್ ಸುಲ್ತಾನಾ ಮತ್ತಿತರರ ಗಾನಸುಧೆಗೆ ಮರುಳಾದವರು ತಮ್ಮ ನೆಚ್ಚಿನ ಗಾಯಕರ ರಸನಿಮಿಷಗಳಿಗೆ ಇಲ್ಲಿ ಸಾಕ್ಷಿಯಾಗಬಹುದು.
©2024 Book Brahma Private Limited.