ಹಿರಿಯ ಲೇಖಕ ಎ.ಎನ್. ಮೂರ್ತಿರಾವ್ ಅವರು ಸಂಗೀತದ ಕುರಿತು ಬರೆದ ಲೇಖನಗಳ ಸಂಗ್ರಹ. ಈ ಕೃತಿಯಲ್ಲಿ ಒಟ್ಟು ಎಂಟು ಬರೆಹಗಳಿವೆ. ಅದರಲ್ಲಿ ನಾಲ್ಕು ಬರೆಹಗಳು ವೀಣೆ ಶೇಷಣ್ಣ, ಮೈಸೂರು ವಾಸುದೇವಾಚಾರ್ಯರು, ರಾಳ್ಳಪಲ್ಲಿ ಅನಂತಕೃಷ್ನ ಹಾಗೂ ವೀಣೆ ದೊರೆಸ್ವಾಮಿ ಅಯ್ಯಂಗಾರ್ಯರು ಅವರನ್ನು ಕುರಿತವುಗಳಾಗಿವೆ.
ಸಂಗೀತಜ್ಞಾನಮು ಅರ್ಥವಿನಾ, ಶಾಸ್ತ್ರೀಯ ಸಂಗೀತ ಕಛೇರಿಯಲ್ಲಿ ನಾವು ನಿರೀಕ್ಷಿಸುವುದೇನು?, ಸಂಗೀತದಲ್ಲಿ ಸ್ವಾತಂತ್ರ, ಬಂಧನ ಮತ್ತು ಟೆಂಪೊ, ಗಮಕಕಲೆ ಎಂಬ ಲೇಖನಗಳನ್ನು ಸಂಕಲಿಸಲಾಗಿದೆ.
ಪುಸ್ತಕದ ಕುರಿತು ಲೇಖಕ ಮೂರ್ತಿರಾವ್ ಅವರು ’ಸಂಗೀತ ನನಗೆ ಕೊಟ್ಟಿರುವ ಆನಂದ, 'ಮನಃಪ್ರಸಾದ', ಅಳತೆಗೆ ಮೀರಿದ್ದು, ಸುಮಾರು ಎಂಟು ದಶಕಗಳ ಕಾಲ ಶಾಸ್ತ್ರೀಯ ಸಂಗೀತವನ್ನು ಕೇಳುತ್ತ ಬಂದಿದ್ದೇನೆ ; ಆದರೂ ಆ ಲಲಿತತಮ ಕಲೆಯನ್ನು ಕುರಿತಂತೆ , * 'ಶಾಸ್ತ್ರೀಯ' ಎನ್ನಬಹುದಾದ ಜ್ಞಾನವನ್ನು ಸಂಪಾದಿಸಿದ್ದೇನೆಂದು ಹೇಳಲಾರೆ. ಅದಕ್ಕಾಗೆ ಮತ್ತೊಂದು ಜನ್ಮ ಎತ್ತಬೇಕು ಎನ್ನಿಸುತ್ತಿದೆ-ನನಗೆ , ಪುನರ್ಜನ್ಮದಲ್ಲಿ ನಂಬಿಕೆಯಿಲ್ಲವಾದರೂ !
ಒಳ್ಳೆಯ ಸಂಗೀತ ಕಚೇರಿಗಳನ್ನು ಕೇಳಿದಾಗ ನನ್ನ ಮನಸ್ಸಿನಲ್ಲಿ ಸುಳಿದು ಹೋದ ಯೋಚನೆ ಭಾವನೆಗಳನ್ನು ಒಳಗೊಂಡಿವೆ ಈ ಪುಟ್ಟ ಪುಸ್ತಕ ದಲ್ಲಿ ಇರುವ ಲೇಖನಗಳು’ ಎಂದು ಬರೆದಿದ್ದಾರೆ.
©2025 Book Brahma Private Limited.