ವಚನಗಳು ಸರಳ ಸುಂದರವಾಗಿದ್ದು ಹಾಡುಗಾರಿಕೆಗೆ ಬಹಳ ಚೆನ್ನಾಗಿ ಒಗ್ಗುತ್ತವೆ. ಸ್ವತಃ ಹಿಂದೂಸ್ಥಾನಿ ಗಾಯಕರು ಹಾಗೂ ಸಂಗೀತ ಪ್ರಾಧ್ಯಾಪಕ ಡಾ. ಹನುಮಣ್ಣ ನಾಯಕ ದೊರೆ ಅವರು, ಹಿಂದೂಸ್ಥಾನಿ ಸಂಗೀತದಲ್ಲಿ ಸಾಧನೆ ಮಾಡಿದವರು. ವಚನಗಾನ ವಾಹಿನಿ ಕೃತಿಯಲ್ಲಿ ವಚನಗಳಿಗೆ ಹಿಂದೂಸ್ಥಾನಿ ಸಂಗೀತದ ಚೌಕಟ್ಟಿನಲ್ಲಿ ಸ್ವರಲಿಪಿ ಅಳವಡಿಸಿಕೊಟ್ಟಿದ್ದಾರೆ. ಈ ಕೃತಿಯ ಎರಡು ಆವೃತ್ತಿಗಳಿದ್ದು, ಮೊದಲ ಆವೃತ್ತಿಯು 2005ರಲ್ಲಿ ಪ್ರಕಟಗೊಂಡಿತ್ತು.
©2025 Book Brahma Private Limited.