ಕನ್ನಡ ಸಾಹಿತ್ಯ ಪರಿಷತ್ತು ತನ್ನ ಪಂಚವಾರ್ಷಿಕ ಯೋಜನೆಯಡಿ ಪ್ರಕಟಿಸಿದ ಕೃತಿ -ನಾದಯಾತ್ರೆ. ವಸಂತ ಕವಲಿ ಅವರು ಬರೆದಿದ್ದಾರೆ. ಈ ಕೃತಿಗೆ ಮುನ್ನುಡಿ ಬರೆದ ಶ್ರೀರಂಗ ಅವರು ‘ಸಂಗೀತದ ಹುಟ್ಟು, ಬೆಳವಣಿಗೆ, ವೈರುಧ್ಯಗಳು, ಅವುಗಳನ್ನು ಬಳಕೆಗೆ ತಂದ ವಿಸ್ವಾಂಸರ ಮಾಹಿತಿಗಳನ್ನೂ ಕುರಿತು ವಿವರಿಸುತ್ತದೆ. ಸಂಗೀತದ ಕಲಾ ವೈಭವದ ಪ್ರದರ್ಶನಕ್ಕೆ ಈ ಕೃತಿಯು ಒಂದು ಕನ್ನಡಿಯಾಗಿದೆ ಎಂದು ಪ್ರಶಂಸಿಸಿದ್ದಾರೆ.
ಲೇಖಕ ವಸಂತ ಕವಲಿ ಅವರು ತಮ್ಮ ಪ್ರಸ್ತಾವನೆಯಲ್ಲಿ ‘ತಮ್ಮ ತಂದೆ ಪಂಡಿತ ಚೆನ್ನಬಸಪ್ಪ ಎಲ್ಲಪ್ಪ ಕವಲಿ ಅವರು ಸಂಗೀತ ವಿದ್ವಾಂಸರು. ಈ ಹಿನ್ನೆಲೆಯಲ್ಲಿ ಅವರಿಂದ ಕೇಳಿ ತಿಳಿದ ಹಾಗೂ ಅವರ ಬಳಿಗೆ ಬಂದ ಸಂಗೀತ ವಿದ್ವಾಂಸ ಮಹನೀಯರಿಂದ ಸಂಗ್ರಹಿಸಿದ ಮಾಹಿತಿಯನ್ನು ನಾದಯಾತ್ರೆ ಕೃತಿಯಲ್ಲಿ ಕಟ್ಟಿಕೊಟ್ಟಿದ್ದೇನೆ’ ಎಂದು ಹೇಳಿದ್ದಾರೆ.
©2024 Book Brahma Private Limited.