ಕಿತಾಬ್‌ ಎ ನೌರಸ್‌

Author : ಅಬ್ದುಲ್ ಮಜೀದ್‌ಖಾನ್‌

Pages 248

₹ 109.00




Year of Publication: 2000
Published by: ಕರ್ನಾಟಕ ಉರ್ದು ಅಕಾಡೆಮಿ
Address: ನೃಪತುಂಗ ರಸ್ತೆ , ಬೆಂಗಳೂರು - 1

Synopsys

‘ಕಿತಾಬ್‌ -ಎ - ನೌರಸ್‌’ ಅಬ್ದುಲ್‌ ಮಜೀದ್‌ ಖಾನ್‌ ಅವರ ಬದುಕು ಬರಹಗಳ ಕೃತಿಯಾಗಿದೆ. ದಕ್ಷಿಣ ಭಾರತದ ಬಿಜಾಪುರದಲ್ಲಿ ಅರಸನಾಗಿದ್ದ ಇಬ್ರಾ ಹಿಂ ಆದಿಲ್‌ಶಾಹ್‌ನ ಉರ್ದು ಗೀತೆಗಳನ್ಗು ಕನ್ನಡ ಭಾವಾನುವಾದ ಸಹಿತ ಸಂಗ್ರಹಿಸಲಾಗಿದೆ. ಇಲ್ಲಿನ ಗೀತೆಗಳನ್ನು ಹಿಂದುಸ್ತಾನಿ ಗಾಯನದ ರಾಗಗಳಿಗೆ ಅಳವಡಿಸಲಾಗಿದ್ದು ಶ್ರೇಷ್ಠ ಸಂಗ್ರಹವೆಂದು ಗೌರವಿಸಲಾಗಿದೆ. ಪರಮತ ಸಹಿಷ್ಣುವಾಗಿದ್ದು, ಅಂದಿನ ದಕ್ಷ ಅಡಳಿತಗಾರನೆಂದು ಪ್ರಸಿದ್ಧರಾಗಿದ್ದು ಸಾಹಿತ್ಯಾಸಕ್ತನಾಗಿದ್ದ ದೊರೆಯ ಬದುಕು-ಬರಹದ ಬಗ್ಗೆ ಉಲ್ಲೇಖಿಸಲಾಗಿದೆ. ಅನೇಕ ಘಟನೆಗಳನ್ನೂ ದಾಖಲಿಸಲಾಗಿದೆ.

About the Author

ಅಬ್ದುಲ್ ಮಜೀದ್‌ಖಾನ್‌
(13 December 1935 - 23 November 2019)

ಕವಿ ಅಬ್ದುಲ್ ಮಜೀದ್‌ಖಾನ್‌ ಅವರು ಶಿವಮೊಗ್ಗ ಜಿಲ್ಲೆ ಸಾಗರದಲ್ಲಿ 1935 ಡಿಸೆಂಬರ್ 13ರಂದು ಜನಿಸಿದರು. ತಂದೆ ಮಹಮ್ಮದ್‌ ಯಾಕೂಬ್‌ಖಾನ್‌, ತಾಯಿ ಹಾಜಿರಾಬಿ. ಮೈಸೂರು ವಿಶ್ವವಿದ್ಯಾಲಯದಲ್ಲಿ ಎಂ.ಎ ಹಾಗೂ ಬೆಂಗಳೂರು ವಿಶ್ವವಿದ್ಯಾಲಯದಿಂದ ಎಲ್.ಎಲ್.ಬಿ ಪದವಿ ಪಡೆದಿದ್ದಾರೆ. ಇಂಗ್ಲಿಷ್‌ ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದ ಇವರು ತದನಂತರ ಸ್ವಯಂ ನಿವೃತ್ತಿ ಪಡೆದರು. ಕತೆ ಕವನಗಳ ರಚನೆಯೊಂದಿಗೆ ಅನುವಾದ ಕೆಲಸದಲ್ಲಿಯೂ ತೊಡಗಿಕೊಂಡಿದ್ದರು. . ಕೇಂದ್ರ ಹಿಂದಿ ನಿರ್ದೇಶನಾಲಯದ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ ಲಭಿಸಿವೆ. ಇವರ ಪ್ರಮುಖ ಕೃತಿಗಳೆಂದರೆ ಉತ್ತರಗಳು, ದಾರಿ, ಗುರುತು (ಕವನ ಸಂಕಲನಗಳು),  ಮಿರ್ಜಾ ಗಾಲಿಬ್, ತಲೆಯಿಲ್ಲದ ಗೌತಮ, ಕೆಂಪುಜನ ...

READ MORE

Related Books