ಇಪ್ಪತ್ತನೆಯ ಶತಮಾನದ ಶ್ರೇಷ್ಠ ಸಂಗೀತಜ್ಞರಲ್ಲಿ ಗಣ್ಯರಾಗಿದ್ದವರು ರಾಳಪಲ್ಲಿ ಆನಂತಕೃಷ್ಣಶರ್ಮರು. ಶ್ರೇಷ್ಠ ಗಾಯಕರೂ ಆಸ್ಥಾನ ವಿದ್ವಾಂಸರು ಆಗಿದ್ದ ಬಿಡಾರಂ ಕೃಷ್ಣಪ್ಪನವರಲ್ಲಿ ಸಂಗೀತಭ್ಯಾಸ ಮಾಡಿದ್ದ ಕರ್ಮದ ಸಂಗೀತ ಶಾಸ್ತ್ರದಲ್ಲೂ ಪ್ರಯೋಗದಲ್ಲಿ ಅಸಾಧಾರಣ ಮೂರ್ತಿಯನ್ನು ಪಡೆದಿದ್ದರು, ಹಲವು ಶಿಷ್ಯರನ್ನೂ ಉನ್ನತಮಟ್ಟದ ಸಂಗೀತಗಾರರನ್ನಾಗಿ ರೂಪಿಸಿದರು. ಸಂಗೀತಶಾಸ್ತ್ರ ವನ್ನೂ ಸಂಗೀತಗಾರರನ್ನೂ ಕುರಿತಂತೆ ಅವರು ಕರ್ನಾಟಕ ಆಂಧ್ರ ಪ್ರದೇಶಗಳಲ್ಲಿ ಹಲವಾರು ಉಪನ್ಯಾಸಗಳನ್ನೂ ಮಾಡಿದ್ದರು. ಕನ್ನಡ ತೆಲುಗುಗಳಲ್ಲಿ ಸುಮಾರು ಲೇಖನಗಳನ್ನೂ ಬರೆದಿದ್ದರು. ಶರ್ಮರ ಆ ಲೇಖನ- ಭಾಷಣಗಳ ಸಂಕಲನ- ಗಾನಕಲೆಯಾಗಿದೆ.
©2024 Book Brahma Private Limited.