ನಾದಬಿಂಬ

Author : ಟಿ.ಎಸ್. ವೇಣುಗೋಪಾಲ್

Pages 140

₹ 170.00




Year of Publication: 2015
Published by: ರಾಗಮಾಲ
Address: ರಾಗಮಾಲ, ಸಿ.ಹೆಚ್-73, 7ನೇ ಮುಖ್ಯರಸ್ತೆ, ಸರಸ್ವತೀಪುರಂ, ಮೈಸೂರು-570009

Synopsys

ಛಾಯಗ್ರಾಹಕ ಅವಿನಾಶ್ ಪ್ಯಾಶ್ ರಿಚಾ ಮೂಲ ಪಠ್ಯ ದೀಪಕ್ ಎಸ್ ರಾಜ, ಸಂಪಾದನೆ ಹಾಗೂ ಅನುವಾದ  ಶೈಲಜ ಮತ್ತು ಟಿ.ಎಸ್.ವೇಣುಗೋಪಾಲ್.

ಸ್ವತಃ ಸಂಗೀತಗಾರರಲ್ಲದ ಆದರೆ ಸಂಗೀತ ಕ್ಷೇತ್ರಕ್ಕೆ ವಿಶೇಷ ರೀತಿಯಲ್ಲಿ ಸೇವೆ ಸಲ್ಲಿಸಿ, ಮಹತ್ತರ ಕೊಡುಗೆ ನೀಡಿರುವ ಕಲಾವಿದರ ಕೃತಿಯನ್ನು ಕನ್ನಡ ಓದುಗರಿಗೆ ಪರಿಚಯಿಸುವ ಪ್ರಯತ್ನವಾಗಿ ’ ನಾದಬಿಂಬ’  ಕೃತಿ ಪ್ರಕಟವಾಗಿದೆ. 

ಅವಿನಾಶ್ ಪ್ಯಾಚ್ ರಿಚಾ ಕ್ಯಾಮೆರಾದ ಮೂಲಕ ಭಾರತದ ಹೆಚ್ಚಿನ ಪ್ರಮುಖ ಸಂಗೀತ, ನೃತ್ಯ ಕಲಾವಿದರನ್ನು ಸೆರೆ ಹಿಡಿದು ಆ ಕಲೆಯನ್ನು ತಮ್ಮ ಮಾಧ್ಯಮದಲ್ಲಿ ದಾಖಲಿಸಿರುವ ಅಪರೂಪದ ಕೆಲಸವನ್ನು ಐದು ದಶಕಗಳಿಗೂ, ಹೆಚ್ಚು ಕಾಲ ಮಾಡಿದ್ದಾರೆ. ಈಗಲೂ ಮಾಡುತ್ತಿದ್ದಾರೆ. ಅವರ ಫೋಟೋಗಳ ಜೊತೆಗೆ ಆಯಾ ಕಲಾವಿದರ ಹಾಗೂ ಅವರ ಕಲೆಯ ಕುರಿತ ವಿವರಗಳನ್ನು ಈ ಪುಸ್ತಕದಲ್ಲಿ ಸಂಕ್ಷಿಪ್ತವಾಗಿ ನೀಡಲಾಗಿದೆ. 

About the Author

ಟಿ.ಎಸ್. ವೇಣುಗೋಪಾಲ್
(24 April 1955)

ಲೇಖಕ ಟಿ. ಎಸ್. ವೇಣುಗೋಪಾಲ್ ಅವರು ಮೈಸೂರಿನವರು. 1955 ಏಪ್ರಿಲ್ 24  ರಂದು ಜನನ. ಸಂಖ್ಯಾಶಾಸ್ತ್ರ ಪ್ರಾಧ್ಯಾಪಕ. ‘ವಾದಿ ಸಂವಾದಿ, ಧರೆಗಿಳಿದ ನಾಟ್ಯತಾರೆ, ಗಾನವಸಂತ, ಭಗವದ್ಗೀತೆ, ಸಾಮಾಜಿಕ ಆರ್ಥಿಕ ಸಂಗತಿಗಳ ಒಳನೋಟ, ಪುರಾಣ ಮತ್ತು ವಾಸ್ತವ’ ಮುಂತಾದ ಕೃತಿಗಳನ್ನು ಲೇಖಕಿ ಶೈಲಜಾ ಅವರೊಂದಿಗೆ ಸಂಪಾದಿಸಿದ್ದಾರೆ. ...

READ MORE

Related Books