ಟಿ ಎಂ ಕೃಷ್ಣ ಶಾಸ್ತ್ರೀಯ ಪರಂಪರೆಯಲ್ಲಿಆಳವಾದ ಪರಿಶ್ರಮ ಇರುವ ಗಾಯಕರು ಹಾಗೂ ಜನಪ್ರಿಯ ಸಂಗೀತಗಾರರು. ತಮ್ಮ ಮಾಧ್ಯಮವಾದ ಸಂಗೀತದಲ್ಲಿ ನಿಜವಾದ ಪ್ಯಾಷನ್ ಇರುವ, ಮತ್ತದನ್ನು ಅರ್ಥ ಮಾಡಿಕೊಳ್ಳಲು ನಿರಂತರ ಹುಡುಕಾಟ ನಡೆಸುತ್ತಿರುವ ಅಪರೂಪದ ಸೃಜನಶೀಲ ಕಲಾವಿದರು. ತಮಗೇ ಹಲವಾರು ಪ್ರಶ್ನೆಗಳನ್ನು ಹಾಕಿಕೊಂಡು ಅದಕ್ಕೆ ಉತ್ತರ ಕಂಡುಕೊಳ್ಳುವುದರಲ್ಲಿ ತಲ್ಲೀನರಾಗಿರುವ ಯುವ ಸಂಗೀತಗಾರ, ಕೇವಲ ಮಾತಿನಲ್ಲಷ್ಟೇ ಅಲ್ಲದೆ, ಬದುಕಿನಲ್ಲಿಯೂ ತಮ್ಮ ನಿಲುವನ್ನು ಕಾರ್ಯರೂಪಕ್ಕೆ ತರುವ ತವಕವಿರುವ ಕಲಾವಿದರು. ಸಂಗೀತ ಕೇವಲ ಒಂದು ಪ್ರದರ್ಶಕಕಲೆಯಾಗಿ ಮಾತ್ರವಾಗದೆ ಅದನ್ನು ನಿಜವಾದ ಕಲೆಯಾಗಿ ಉಳಿಸಬೇಕೆನ್ನುವ ಆಸೆ ಇರುವ ಸಂಗೀತಗಾರರು. ಇವರ ಅಭಿಪ್ರಾಯವನ್ನು ಒಪ್ಪುವವರು ಇದ್ದಾರೆ ಹಾಗೆಯೇ ವಿರೋಧಿಸುವವರೂ ಇದ್ದಾರೆ. ಆದರೆ ಇವರ ಪ್ರಶ್ನೆಗಳನ್ನು ನಿರ್ಲಕ್ಷಿಸುವುದುಸಾಧ್ಯವಿಲ್ಲ. ಸಂಗೀತಕಲೆಗೆ ಸಂಬಂಧಿಸಿದಂತೆ ಇವರ ಕಾಳಜಿಯನ್ನು ಅನುಮಾನಿಸುವುದು ಸಾಧ್ಯವಿಲ್ಲ. ಇವರೆತ್ತುವ ಪ್ರಶ್ನೆಗಳು ಇವರಚಿಂತನೆಗಳು ಸಂಗೀತಕ್ಷೇತ್ರಕ್ಕೆ ಸಂಬಂಧಿಸಿದಂತೆನಮ್ಮ ಅರಿವನ್ನು ವಿಸ್ತರಿಸಬಲ್ಲದು.
©2025 Book Brahma Private Limited.