‘ಯಕ್ಷಗಾನ ಪ್ರಸಂಗದಶಕ’ ಅಗರಿ ಭಾಸ್ಕರ ರಾಯರ ಯಕ್ಷಗಾನ ಪ್ರಸಂಗಸಂಪುಟ. ಅಗರಿ ಭಾಸ್ಕರ ರಾಯರು ತೆಂಕುತಿಟ್ಟಿನ ಪ್ರಸಿದ್ದ ಯಕ್ಷಗಾನ ಭಾಗವತರಾದ ಅಗರಿ ಶ್ರೀನಿವಾಸ ಭಾಗವತರ ಸುಪುತ್ರರು. ಪ್ರಸಂಗಕರ್ತರಾಗಿ ಅವರ ಪರಂಪರೆಯನ್ನೇ ಮುಂದುವರಿಸಿದವರು. ಭಾಸ್ಕರ ರಾಯರಿಗೆ ಯಕ್ಷಗಾನದ ಹೆಚ್ಚಿನ ಮಟ್ಟುಗಳು ಕಂಠದಲ್ಲಿಯೂ ಮನಸ್ಸಿನಲ್ಲಿಯೂ ಸ್ಥಿರವಾಗಿರುವುದರಿಂದ ಬಹಳ ಸುಲಭವಾಗಿ ಅವರು ಯಕ್ಷಗಾನಪದ್ಯಗಳನ್ನು ರಚಿಸಬಲ್ಲರು. ಯಕ್ಷಗಾನ ಕ್ಷೇತ್ರಕ್ಕೆ ಹೊಂದುವಂತೆ ಕಾಲ್ಪನಿಕ ಕಥೆಗಳನ್ನು ಅಳವಡಿಸಿ ಪ್ರಸಂಗರಚನೆ ಮಾಡಿ ಅವರು ಹೆಸರು ಪಡೆದಿದ್ದಾರೆ.
ಅವರ ಕೆಲವು ಕೃತಿಗಳು ಈಗಾಗಲೇ ಮುದ್ರಿತವಾಗಿದ್ದರೂ ಸಂಪುಟದ ರೂಪದಲ್ಲಿ ಒಟ್ಟಾಗಿ ಬರುತ್ತಿರುವುದು ಇದೇ ಮೊದಲ ಬಾರಿ. ಹತ್ತು ಪ್ರಸಂಗಗಳು ಈ ಯಕ್ಷಗಾನ ಪ್ರಸಂಗದಶಕದಲ್ಲಿ ಒಟ್ಟಾಗಿವೆ. ಇತ್ತೀಚೆಯ ದಿನಗಳಲ್ಲಿ ಪ್ರಸಂಗಕರ್ತರ ಕೃತಿಗಳೆಲ್ಲ ಒಟ್ಟಾಗಿ ಸಂಪುಟ ರೂಪದಲ್ಲಿ ಹೊರ ಬರುತ್ತಿರುವುದು ಯಕ್ಷಗಾನಸಾಹಿತ್ಯಕ್ಷೇತ್ರದಲ್ಲಿ ಗಮನಾರ್ಹ ವಿಷಯ. ಆ ಸಂಪುಟಗಳ ಸಾಹಿತ್ಯರಾಶಿಗೆ ಅಗರಿ ಭಾಸ್ಕರ ರಾಯರ ಈ ಸಂಪುಟ ಹೊಸ ಸೇರ್ಪಡೆ, ಪ್ರಸಂಗಗಳನ್ನು ಅಧ್ಯಯನ ಮಾಡುವವರಿಗೆ ಈ ಸಂಪುಟದಲ್ಲಿ ಸಾಕಷ್ಟು ಹೂರಣವಿದೆ.
©2024 Book Brahma Private Limited.