ಲೇಖಕ ಚಂದ್ರಶೇಖರ ದಾಮ್ಲೆ ಅವರು ಬರೆದಿರುವ ಕೃತಿ ಯಕ್ಷಗಾನ ರಂಗಭಾಷೆ. ಯಕ್ಷಗಾನ ರಂಗಭಾಷೆ ಎಂಬ ಪುಸ್ತಕದಲ್ಲಿ ಡಾ. ಚಂದ್ರಶೇಖರ ದಾಮ್ಲೆಯವರು ಬರೆದ ಯಕ್ಷಗಾನದ ರಂಗಭಾಷೆ, ಮಣ್ಣಿನ ಕಲೆ ಯಕ್ಷಗಾನ, ತುಳುನಾಡಿನ ಸಾಮಾಜಿಕ ಸ್ಥಿತ್ಯಂತರಗಳು ಮತ್ತು ಯಕ್ಷಗಾನ, ಯಕ್ಷಗಾನಕ್ಕೊಂದು ಕಾಯಕಲ್ಪ, ತಾಳಮದ್ದಳೆ – ಚಿಂತನ ಕುಲುಮೆ, ಬದಲಾಗುತ್ತಿರುವ ಸಮಾಜದಲ್ಲಿ ಯಕ್ಷಗಾನ ಕಲೆ, ಯಕ್ಷಗಾನ ಪೋಷಣೆ: ಸಂರಕ್ಷಣೆ, ವಿದ್ಯಾರ್ಥಿಗಳಲ್ಲಿ ಕಲಾಪ್ರಜ್ಞೆ, ಆಡಲಾಗುತ್ತಿರುವ ಮೌಲ್ಯ, ಯಕ್ಷಗಾನದಲ್ಲಿ ಮೌಲ್ಯ ಪರಿವರ್ತನೆ, ಯಕ್ಷಗಾನಕ್ಕೆ ನಿರ್ದೇಶನ ಬೇಕೇ?, ಅರ್ಥಗಾರಿಕೆ ಶೇಣಿ ಚಿಂತನ ಎಂಬ ಹನ್ನೆರಡು ಲೇಖನಗಳಿವೆ. ಕರ್ನಾಟಕ ಸರಕಾರದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನೆರವಿನಿಂದ ಸುಳ್ಯ ಸ್ನೇಹ ಶಿಕ್ಷಣ ಸಂಸ್ಥೆಯ ಬಯಲು ರಂಗಮಂದಿರದಲ್ಲಿ ಸುಳ್ಯ ತೆಂಕುತಿಟ್ಟು ಹಿತರಕ್ಷಣಾ ವೇದಿಕೆಯು ಶ್ರೀ ಬಲಿಪ ನಾರಾಯಣ ಭಾಗವತರ ನಿರ್ದೇಶನದಲ್ಲಿ ಏರ್ಪಡಿಸಿದ ಮಹಾಭಾರತದ ಹದಿನೆಂಟು ಪ್ರಸಂಗಗಳ ಪ್ರದರ್ಶನದ ಸಂದರ್ಭದಲ್ಲಿ ಯಕ್ಷಗಾನ ರಂಗಭಾಷೆ ಎಂಬ ಈ ಪುಸ್ತಕವನ್ನು ಕಲಾಪ್ರೇಮಿಗಳಿಗೆ ಅರ್ಪಿಸಲಾಗಿತ್ತು. ಮುನ್ನುಡಿಯನ್ನು ಬರೆದವರು ವಿಶ್ರಾಂತ ಕುಲಪತಿಗಳಾದ ಪ್ರೊ.ಬಿ. ಎ. ವಿವೇಕ ರೈ ಅವರು. ಕೃತಿಕಾರನ ಅರಿಕೆ ಎಂಬ ಲೇಖನದಲ್ಲಿ ಚಂದ್ರಶೇಖರ ದಾಮ್ಲೆಯವರು ಅನಿಸಿಕೆಗಳನ್ನು ವ್ಯಕ್ತಪಡಿಸಿ, ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳನ್ನು ಸೂಚಿಸಿದ್ದಾರೆ. ಪುಸ್ತಕದ ಹೊರ ಆವರಣದಲ್ಲಿ ಪ್ರೊ. ಬಿ. ಎ. ವಿವೇಕ ರೈ ಅವರ ಮುನ್ನುಡಿ ಲೇಖನದಲ್ಲಿರುವ ವಿಚಾರಗಳನ್ನು ನೀಡಲಾಗಿದೆ.
©2024 Book Brahma Private Limited.