ಯಕ್ಷಗಾನ ಗುರುಕುಲದ ರೂವಾರಿ – ಕವಿ ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್ಟ

Author : ಚಂದ್ರಶೇಖರ ಮಂಡೆಕೋಲು



Year of Publication: 2015
Published by: ಕನ್ನಡ ಸಂಘ ಕಾಂತಾವರ (ರಿ.)

Synopsys

ಲೇಖಕ ಚಂದ್ರಶೇಖರ ಮಂಡೆಕೋಲು ಅವರ ಕೃತಿ ಯಕ್ಷಗಾನ ಗುರುಕುಲದ ರೂವಾರಿ ಕವಿ ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್ಟ. ಶೀರ್ಷಿಕೆಯೇ ಸೂಚಿಸುವಂತೆ ಈ ಹೊತ್ತಗೆಯು ದಿ| ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್ಟರ ಬಗೆಗೆ ಬರೆಯಲ್ಪಟ್ಟಿತು. ಸದ್ರಿ ಸಂಘದ ‘ನಾಡಿಗೆ ನಮಸ್ಕಾರ’ ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯಾಗಿ ಹೊರಬಂದಿತ್ತು. ಕಾಂತಾವರ ಕನ್ನಡ ಸಂಘದ ಅಧ್ಯಕ್ಷ ಡಾ. ನಾ. ಮೊಗಸಾಲೆ ಅವರೂ. ಸಂಪಾದಕ ಡಾ.ಬಿ. ಜನಾರ್ದನ ಭಟ್ ಅವರೂ ಲೇಖನಗಳ ಮೂಲಕ ಅನಿಸಿಕೆಗಳನ್ನು ವ್ಯಕ್ತಪಡಿಸಿರುತ್ತಾರೆ. ಬಳಿಕ ಮಹಾನ್ ಸಾಧಕರಾದ ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್ಟರ ಬದುಕು, ಸಾಧನೆ, ವ್ಯಕ್ತಿತ್ವಗಳ ಬಗೆಗೆ ವಿವರಗಳನ್ನು ಶ್ರೀ ಚಂದ್ರಶೇಖರ ಮಂಡೆಕೋಲು ಅವರು ತಮ್ಮ ಬರಹದಲ್ಲಿ ಓದುಗರಿಗೆ ತಿಳಿಸಿದ್ದಾರೆ.

ಅತ್ತ ಯುದ್ಧದ ಬಯಲು, ಇತ್ತ ಈ ಮನೆಯ ಜಗುಲಿ, ನಿರ್ಮಲ ಜಲಸಮೀಪದಿ ಮಾಡಿಕೊಂಡರು ಪರ್ಣಶಾಲೆಯ, ಅಮ್ಮ ಹೇಳುತ್ತಿದ್ದ ಕಥೆಗಳು, ಮೊದಲ ರಂಗಸ್ಥಳ ಕೀರಿಕ್ಕಾಡು ಗುಡ್ಡ, ಮನೆತನದ ಶಾಲೆಗೆ ಗುರುವಾಗಿದ್ದು, ಮಾಸ್ತರರ ಸರ್ವೋದಯ ಭಾವ, ಶಾಲೆಯೇ ಬದುಕಿನ ಪ್ರಯೋಗ ರಂಗ, ಶ್ವೇತಕುಮಾರ ಚರಿತೆಯನ್ನು ಬರೆದದ್ದು, ಕೀರಿಕ್ಕಾಡಿನಿಂದ ಬನಾರಿಗೆ ಪಯಣ, ಮಾಡಿಕೊಂಡರು ಪರ್ಣಶಾಲೆಯ, ಗಾಂಧೀಜಿಯ ಸತ್ಯಾಗ್ರಹ, ಶಿಷ್ಯಂದಿರ ಬದುಕಿಗೂ ನೆರವಾದರು, ಆ ನೆಲದಲ್ಲಿ ಕೃಷ್ಣ ಸಿಕ್ಕಿದ್ದ, ನಿಜದ ನಾಡೋಜ, ಯಕ್ಷಗಾನ ನಾಟಕವೆಂಬ ಪರಿಕಲ್ಪನೆ, ಅಧಿಕಾರಿಗಳಲ್ಲೂ ಕಲೆಯ ಬೆಳಗು, ಪೊರೆವ ಮಣ್ಣೂ ಔಷಧಿಯಾದಾಗ, ಅಕ್ಷರಗಳಲ್ಲಿ ಎದೆಯ ದನಿ, ಶರಣನ ದರ್ಪಣ, ಎದೆ ತಟ್ಟುವ ಪದ ನಾದ, ಪ್ರಸಂಗ ಸಾಹಿತ್ಯದಲ್ಲೊಂದು ದಾಖಲೆ!, ಮೇರು ಕಲಾವಿದನೂ ಎದ್ದು ಬಂದು ನಮಿಸಿದನೆಂದರೆ, ಪ್ರತ್ಯೇಕ ಶೈಲಿಯನ್ನೇ ಸೃಜಿಸಿದ ಅರ್ಥಗಾರಿಕೆ, ಕೀರಿಕ್ಕಾಡು ಮೀಮಾಂಸೆ, ದಾರಿ ತೋರುವ ಗೆಳೆಯ, ಯಕ್ಷಲೋಕದ ತಲೆಮಾರುಗಳ ಒಡನಾಟ, ಪ್ರೌಢ ಲಾಲಿತ್ಯದ ಭಾಷೆ, ಕೆಂಬುಡೆ ಹೂ ಚಟ್ನಿ ಕುದನೆಗೊಜ್ಜಿ ಕಾಟು ಕೇನೆ ಸಾಸಮೆ, ಅಜ್ಜನ ಶಾರದಾ ಡೈರಿ,ಇದು ಬರಿಯ ರಂಗಸ್ಥಳವಲ್ಲ, ತಂದೆಯಂತೆ ಮಕ್ಕಳು, ಈ ನಿಷ್ಠೆ ನಿರಂತರವಾಗಿರಲಿ ಎಂಬ ವಿಚಾರಗಳಡಿ ಶ್ರೀ ಚಂದ್ರಶೇಖರ ಮಂಡೆಕೋಲು ಅವರು ಈ ಹೊತ್ತಗೆಗೆ ರೂಪವನ್ನು ನೀಡಿರುತ್ತಾರೆ. ಅಲ್ಲದೆ ‘ಅನುಬಂಧಗಳು’ ಎಂಬ ಶೀರ್ಷಿಕೆಯಡಿಯಲ್ಲಿ ಡಾ. ಶ್ರೀಕೃಷ್ಣ ಭಟ್ ಅರ್ತಿಕಜೆ, ಡಾ. ಅಮೃತ ಸೋಮೇಶ್ವರ, ಮಂದಾರ ಕೇಶವ ಭಟ್ಟ, ಪೆರ್ಲ ಕೃಷ್ಣ ಭಟ್, ರಾಮಚಂದ್ರ ಉಚ್ಚಿಲ, ಕೆದಂಬಾಡಿ ಜತ್ತಪ್ಪ ರೈ, ಶೇಣಿ ಗೋಪಾಲಕೃಷ್ಣ ಭಟ್, ಕೇದಗಡಿ ಗುಡ್ಡಪ್ಪ ಗೌಡ ಅವರ ಅನಿಸಿಕೆಗಳನ್ನು ನೀಡಲಾಗಿದೆ. ಪುಸ್ತಕದ ಕೊನೆಯಲ್ಲಿ ಕನ್ನಡ ಸಂಘ ಕಾಂತಾವರದ ನಾಡಿಗೆ ನಮಸ್ಕಾರ ಗ್ರಂಥಮಾಲೆಯಡಿ ಪ್ರಕಟಗೊಂಡ ಪುಸ್ತಕಗಳ ವಿವರಗಳನ್ನು ನೀಡಲಾಗಿದೆ. ಪುಸ್ತಕದ ಹೊರ ಆವರಣದಲ್ಲಿ ಲೇಖಕ ಶ್ರೀ ಚಂದ್ರಶೇಖರ ಮಂಡೆಕೋಲು ಅವರ ಸಾಹಿತ್ಯಾಸಕ್ತಿಯ ಬಗೆಗೆ ಶ್ರೀ ಬಿ. ಜನಾರ್ದನ ಭಟ್ ಅವರು ಪ್ರಶಂಸಿಸಿ ಶುಭ ಹಾರೈಸಿದ ಬರಹವನ್ನು ನೀಡಲಾಗಿದೆ.

About the Author

ಚಂದ್ರಶೇಖರ ಮಂಡೆಕೋಲು

ಚಂದ್ರಶೇಖರ್ ಮಂಡೆಕೋಲು- ತುಳುನಾಡಿನ ನವೀನ ಸಾಹಿತ್ಯದ ಭರವಸೆಯ ಬರಹಗಾರ. ಸಾಹಿತ್ಯ ಹಾಗೂ ಪತ್ರಿಕೋದ್ಯಮದಲ್ಲಿ ಹೊಸ ಸಾಧ್ಯತೆಗಳ ಹುಡುಕಾಟದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಚಂದ್ರಶೇಖರ್, ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದವರು. ಸುಳ್ಯದ ನೆಹರೂ ಸ್ಮಾರಕ ಕಾಲೇಜಿನಲ್ಲಿ ಪದವಿ, ಮಂಗಳೂರು ವಿವಿಯಲ್ಲಿ ಕನ್ನಡದಲ್ಲಿ ಸ್ನಾನಕೋತರ ಪದವಿ ಪಡೆದಿದ್ದಾರೆ. ವೃತ್ತಿಯಲ್ಲಿ ಪತ್ರಕರ್ತರಾಗಿರುವ ಅವರು ಉದಯವಾಣಿ, ವಿಜಯವಾಣಿ ಪತ್ರಿಕೆಗಳಲ್ಲಿ ಉಪಸಂಪಾದಕರಾಗಿ ಕಾರ್ಯನಿರ್ವಹಿಸಿದ್ದು, ಸದ್ಯ ನ್ಯೂಸ್ 18 ಸುದ್ದಿವಾಹಿನಿಯಲ್ಲಿ ಮುಖ್ಯ ಉಪಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಾಲೇಜು ದಿನಗಳಿಂದಲೂ ಬರಹದ ಗೀಳು, ತುಳು ಸಂಸ್ಕೃತಿ ಕುರಿತ ಅಧ್ಯಯನಪೂರ್ಣ ‘ಅನ್ವೇಷಣೆ’ ಚೊಚ್ಚಲ ಕೃತಿಗೆ ತುಳು ...

READ MORE

Related Books