ಲೇಖಕ ಲಕ್ಷ್ಮೀಶ್ ಹೆಗಡೆ ಸೋಂದಾ ಅವರ ಕೃತಿ ‘ಯಕ್ಷ ಪರಂಪರೆ’. ಪ್ರಸ್ತುತ ಕೃತಿಯು ಉತ್ತರ ಕನ್ನಡ ಜಿಲ್ಲೆಯ ಬಡಗು ತಿಟ್ಟಿನ ಯಕ್ಷಗಾನದ ಪ್ರಮುಖ ವೇಷಧಾರಿಗಳ ಸಂಕ್ಷಿಪ್ತ ಜೀವನ ಸಾಧನೆಯ ಪರಿಚಯವನ್ನೊಳಗೊಂಡಿದೆ. ಕೆರೆಮನೆ ಶಿವಾನಂದ ಹೆಗಡೆ, ಗೋಡೆ ನಾರಾಯಣ ಹೆಗಡೆ, ಪ್ರೊ.ಎಮ್. ಎ ಹೆಗಡೆ ಹಾಗೂ ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರು ಈ ಕೃತಿಯಲ್ಲಿ ಬೆನ್ನುಡಿಯ ಮಾತುಗಳನ್ನು ಹಂಚಿಕೊಂಡಿದ್ದಾರೆ. ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರು ಹೇಳುವಂತೆ, “ಯಕ್ಷ ಪರಂಪರೆ" ಎಂಬ ಕೃತಿಯಲ್ಲಿ ನಮ್ಮ ಉತ್ತರ ಕನ್ನಡ ಜಿಲ್ಲೆಯ ಯಕ್ಷಗಾನದ ಶ್ರೇಷ್ಠ ನಾಯಕ, ಪ್ರತಿನಾಯಕ ಕಲಾವಿದರನ್ನು ಪರಿಚಯಿಸಿ, ಪ್ರಕಟಿಸುವ ನಿಮ್ಮ ಈ ಪ್ರಯತ್ನ ತುಂಬ ಶ್ಲಾಘನೀಯವಾಗಿದೆ. ಇದು ಕಲಾವಿದರಿಗೂ ಸಂತೋಷ ಹಾಗೂ ಅಭಿಮಾನಿಗಳಿಗೂ ಸಂತೋಷ ತರುತ್ತದೆ. ಹಳೆಯ ಕಲಾವಿದರು ಹೊಸ ಪೀಳಿಗೆಯ ಎಲ್ಲ ಕಲಾವಿದರ ಬಗ್ಗೆ ಪತ್ರಿಕೆಯಲ್ಲಿ ಪ್ರಕಟಿಸುತ್ತಿರುವುದು ನಮ್ಮ ಜಿಲ್ಲೆಗೆ ಹೆಮ್ಮೆಯ ಸಂಗತಿ. ನಮ್ಮ ಜಿಲ್ಲೆಯಲ್ಲಿ ಇಂತಹ ಕ್ರಿಯಾಶೀಲತೆ ಅಪರೂಪ. ನಿಮ್ಮ ಈ ಸಾಹಸ ಕೃತಿಯಾಗುವುದು ಅರ್ಥಪೂರ್ಣವಾಗಿದೆ. ನಿಮ್ಮ ಈ ಪ್ರಯತ್ನಕ್ಕೆ ರಾಜ್ಯ ಹಾಗೂ ದೇಶಮಟ್ಟದಲ್ಲಿ ಪ್ರಶಂಸೆ, ಗೌರವಗಳು ದೊರಕಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಇದಕ್ಕೆ ನನ್ನ ಶುಭ ಹಾರೈಕೆಗಳು ಎಂದಿದ್ದಾರೆ.
©2024 Book Brahma Private Limited.