ಯಕ್ಷಗಾನ ಹಸ್ತಾಭಿನಯ ದರ್ಪಣ

Author : ಜಿ.ಎಸ್. ಹೆಗಡೆ

Pages 60

₹ 15.00




Year of Publication: 1995
Published by: ಕರ್ನಾಟಕ ಜನಪದ ಮತ್ತು ಯಕ್ಷಗಾನ ಅಕಾಡೆಮಿ
Address: ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು

Synopsys

ಯಕ್ಷಗಾನದಲ್ಲಿ ಹಸ್ತಾಭಿನಯದ ಬಗ್ಗೆ ಈ ಕೃತಿಯು ಸಮಗ್ರ ಮಾಹಿತಿಯನ್ನು ನೀಡುತ್ತದೆ. ಯಕ್ಷಗಾನ ಕಲಾ ಮಾಧ್ಯಮದಲ್ಲಿ ನಿಖರವಾಗಿ, ಇದೇ ರೀತಿಯಲ್ಲಿರಬೇಕೆಂದು ಹೇಳುವವರು ಕಡಿಮೆ. ಆಧಾರ ಗ್ರಂಥಗಳು ಇಲ್ಲ. ಆದ್ದರಿಂದ ಯಾವುದು ಕಲೆಯನ್ನು ಹೇಗೆ ಬಳಸಬೇಕು, ಹಾಗೆ ಉಪಯೋಗವಾದಾಗ ಆಗುವ ಪರಿಣಾಮವೇನು? ಇದನ್ನೆಲ್ಲ ಲಕ್ಷಿಸಿ ಈ ಗ್ರಂಥ ರಚಿಸಲಾಗಿದೆ. ಈ ಕೃತಿಯಲ್ಲಿರುವ ರೇಖಾಚಿತ್ರಗಳು, ಹಸ್ತಾಭಿನಯದ ಚಿತ್ರಗಳು, ಅಭ್ಯಾಸ ಮಾಡುವವರಿಗೆ ಹಾಗೂ ಅಧ್ಯಾಪಕರಿಗೆ ಮಾರ್ಗದರ್ಶಕವಾಗಿದೆ.

About the Author

ಜಿ.ಎಸ್. ಹೆಗಡೆ

ಯಕ್ಷಗಾನ ಕಲಾವಿದರು, ಬರಹಗಾರರಾದ ಜಿ.ಎಸ್. ಹೆಗಡೆ ಅವರು ವೃತ್ತಿಯಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದವರು.  ಮೂಲತಃ ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರದವರು. ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಕಾಸರಗೋಡುಸೇರಿದಂತೆ ಹಲವು ಪ್ರದೇಶಗಳ ಕಲಾವಿದರನ್ನು ಸಂಪರ್ಕಿಸಿ ಯಕ್ಷಗಾನ ಹಸ್ತಮುದ್ರಿಕೆಯ ಬಗ್ಗೆ ವಿಶೇಷ ಅಧ್ಯಯನ ಮಾಡಿದವರು. ಯಕ್ಷಗಾನದಲ್ಲಿ ಸಂಸ್ಕೃತದ ಪ್ರಭಾವದ ಬಗ್ಗೆ ವಿಶೇಷ ಅಧ್ಯಯನ ಮಾಡಿದ್ದರು. ಯಕ್ಷಗಾನ ಹಸ್ತಮುದ್ರಿಕೆ ಇವರು ರಚಿಸಿದ ಕೃತಿಯಾಗಿದೆ.  ...

READ MORE

Related Books