ಹಿರಿಯ ರಂಗಕರ್ಮಿ ರಮೇಶ್ ಬೇಗಾರ್‌ರವರ 25 ವರ್ಷಗಳ ಬಣ್ಣದ ಬದುಕಿನ ಸಾಂಸ್ಕೃತಿಕ ದಾಖಲೀಕರಣ. ರಮೇಶ್ ಬೇಗಾರ್ ಒಂದು ಕಾರಣಕ್ಕೆ ಬಹಳ ಮುಖ್ಯರಾಗುತ್ತಾರೆ. ಶೃಂಗೇರಿ ಜಗದ್ಗುರು ಸಂಸ್ಥಾನದ ಸಾಮಾಜಿಕ ಸೇವಾ ಕಾರ್ಯಗಳನ್ನು ಹೊರಜಗತ್ತಿಗೆ ತಿಳಿಸುವಲ್ಲಿ ಇವರದು ಪ್ರಮುಖ ಪಾತ್ರ. ರಮೇಶ್ ಎಲ್ಲೆಂದರಲ್ಲಿ ಮಾತನಾಡುವವರಲ್ಲ ಆದರೆ ಮಾತನಾಡಲು ನಿಂತರೆ ಯಾರಿಗೂ ಬಿಟ್ಟು ಕೊಡುವವರಲ್ಲ. ಶಬ್ದಗಳ ಆಯ್ಕೆ, ಸ್ವರದ ಏರಿಳಿತ, ಉಚ್ಛಾರಣೆಯಲ್ಲಿ ಸ್ಪಷ್ಟತೆ ಇವುಗಳಿಂದಾಗಿ ಅವರ ನಿರೂಪಣೆ ಎಂದರೆ ಕೇಳುಗರಿಗೆ ರಸದೌತಣವಿದ್ದಂತೆ.ಇನ್ನು ರಮೇಶ್ ಅವರ ಬಹುದೊಡ್ಡ ಆಸ್ತಿ ಅವರ ಗೆಳೆಯರ ಬಳಗ. ಒಬ್ಬ ರಂಗಕರ್ಮಿ ತನ್ನ ಸಹಮಾನವರೊಟ್ಟಿಗೆ ಉಳಿಸಿಕೊಳ್ಳಬಹುದಾದ ಸಂಬಂಧ ಸೂಕ್ಷ್ಮತೆಯೇ ಅವನ ಕಲೆಯ ಜೀವಂತಿಕೆಯಾಗಿರುತ್ತದೆ. ಈ ವಿಚಾರದಲ್ಲಿ ರಮೇಶ್ ಬೇಗಾರ್ ಪ್ರಬುದ್ಧತೆಯನ್ನು ಸಾಧಿಸಿದ್ದಾರೆ.
©2024 Book Brahma Private Limited.