ಯಕ್ಷಗಾನ ಜ್ವಾಲಾ ಪ್ರತಾಪ ನಾಟಕವು ಮಹಾಭಾರತದ ಸುತ್ತ ಹೆಣೆದಿರುವಂತಹದ್ದಾಗಿದೆ. ಧರ್ಮರಾಯನ ಅಶ್ವಮೇಧದ ಕುದುರೆಯನ್ನು ಬಭ್ರುವಾಹನ ಕಟ್ಟಿ ಹಾಕುತ್ತಾನೆ. ಇದರಿಂದಾಗಿ ಬಭ್ರುವಾಹನ ಹಾಗೂ ಅರ್ಜುನನಿಗೂ ಯುದ್ದವಾಗಿ ಕೊನೆಗೆ ಅರ್ಜುನನ ಶಿರಚ್ಚೇದವಾಗುತ್ತದೆ. ಇದು ನಮಗೆಲ್ಲ ಗೊತ್ತಿರುವ ಕಥೆ. ಈ ಕಥೆಯನ್ನೇ ಇಟ್ಟುಕೊಂಡು ಯಕ್ಷಗಾನ ಪ್ರಸಂಗವನ್ನು ಲೇಖಕರು ಕಟ್ಟಿಕೊಟ್ಟಿದ್ದಾರೆ. ಈ ಯಕ್ಷಗಾನ ಪ್ರಸಂಗಗಳಲ್ಲಿ ಅಂಬೆಯನ್ನು ಬಿಟ್ಟರೆ ಜ್ವಾಲಾಳ ಪಾತ್ರವೇ ಉಜ್ವಲವಾದದ್ದೆಂದು ನಂಬಲಾಗಿದೆ. ಈ ನಾಟಕದಲ್ಲಿ ಜಾಲೆಯ ಪಾತ್ರ ಪೌರಾಣಿಕವಾಗಿದ್ದರೂ, ಆಧುನಿಕ ಕಾಲದ ಹೆಣ್ಣಿನ ಸ್ವಾತಂತ್ರ್ಯ ಮತ್ತು ಸ್ವಾಭಿಮಾನಕ್ಕೆ ಒತ್ತು ನೀಡಿದಂತೆ ಚಿತ್ರಿಸಲಾಗಿದೆ. ವಿವೇಚನೆ ಕಳೆದುಕೊಂಡು ಹಠಕ್ಕೆ ಬಿದ್ದು ವರ್ತಿಸಿದರೆ, ಏನೆಲ್ಲಾ ಅನಾಹುತಗಳು ಆಗುತ್ತವೆ ಎಂಬುದಕ್ಕೆ ಈ ನಾಟಕದ ಉದ್ದಕ್ಕೂ ಸಾಕ್ಷ್ಯಗಳು ಸಿಗುತ್ತವೆ. ಹೊಸ್ತೋಟ ಮಂಜುನಾಥರು ಬರೆದಿರುವ ಸಂಭಾಷಣೆಗಳು ವೈಚಾರಿಕತೆಯಿಂದಲೂ, ಕಾವ್ಯಾತಕತೆಯಿಂದ ಕೂಡಿವೆ. ನಾಟಕದುದ್ದಕ್ಕೂ ಬರುವ ಕಂದಪದ್ಯಗಳು ಇಡೀ ಪ್ರಸಂಗದ ಸೊಗಸನ್ನು ಹೆಚ್ಚಿಸಿವೆ.
©2024 Book Brahma Private Limited.