ಯಕ್ಷಗಾನ ಮತ್ತು ಅದರ ಸೋದರ ಕಲೆಗಳನ್ನು ಒಟ್ಟಾಗಿ ಕಂಡು ಅವುಗಳಲ್ಲಿ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಮುಂದಿನ ಕಲಾಸಕ್ತರಿಗೆ ನೀಡುವ ಜವಾಬ್ದಾರಿ ನಮ್ಮ ಮೇಲಿದೆ. ಪ್ರಸ್ತುತ ಯಕ್ಷಗಾನ ಕಲೆಯಲ್ಲಿನ ಜಾಗತೀಕರಣದ ಪ್ರಭಾವದಿಂದಾಗಿರುವ ಸಣ್ಣಪುಟ್ಟ ತಲ್ಲಣಗಳಿಗೆ ಉತ್ತರಿಸುವ ಕಾರ್ಯ ಆಗಬೇಕಿದೆ. ಆ ನಿಟ್ಟಿನಲ್ಲಿ ಯಕ್ಷಗಾನ ಕಲೆಗೆ ಸಂಬಂಧಿಸಿದ ವಿವಿಧ ವಿಷಯಗಳನ್ನು ಕುರಿತ ಈ ಕ್ಷೇತ್ರದ ತಜ್ಞರಿಂದ ವಿದ್ವಾಂಸರಿಂದ ಬರೆಸಿದ ಲೇಖನಗಳ ಸಂಗ್ರಹವಾಗಿರುವ `ಮಣಿಹಾರ’ ಕೃತಿ ಉತ್ತಮ ಆಕರ ಕೃತಿಯಾಗಲಿದೆ. ಯಕ್ಷಗಾನ ಕಲೆಯ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಅರಿತವರು ಹಾಗೂ ಕಲೆಯ ವಿವಿಧ ಅಂಗಗಳಲ್ಲಿ ತಲಸ್ಪರ್ಶಿ ಅಧ್ಯಯನ ಮಾಡಿರುವ ಹಿರಿಯರು ಈ ಕೃತಿಯ ಮೂಲಕ ತಮ್ಮ ಅನುಭವದ ಸಾರವನ್ನು ಓದುಗರಿಗೆ ನೀಡಿದ್ದಾರೆ. ನಾಲ್ಕಾರು ಪ್ರಭೇದಗಳಲ್ಲಿ ಪ್ರಾದೇಶಿಕ ತಿಟ್ಟು-ಮಟ್ಟುಗಳಲ್ಲಿ ವಿಕಾಸಗೊಂಡಿರುವ ಕಲಾಪ್ರಕಾರವೊಂದರ ಅಧ್ಯಯನ ಅತ್ಯಂತ ಜಟಿಲವಾದ ಸಂರ್ಕೀಣವಾದ ಒಂದು ಪ್ರಕ್ರಿಯೆ. ಈ ಹಿನ್ನೆಲೆಯಲ್ಲಿ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಪ್ರಚಲಿತವಾಗಿರುವ ಪ್ರಭೇದಗಳನ್ನು ಅಲ್ಲಿನ ಕಲಾಸೂಕ್ಷö್ಮತೆಗಳನ್ನು ಪರಿಚಯಿಸುವ ಪ್ರಯತ್ನವೂ ಕೂಡ ಕೃತಿಯ ಮೂಲಕ ಸಾಧ್ಯವಾಗಲಿದೆ. ಈ ಮೌಲ್ಯಯುತ ಹೊತ್ತಿಗೆಯ ಪ್ರಯೋಜನವನ್ನು ಎಲ್ಲರೂ ಪಡೆದುಕೊಂಡರೆ ನಮ್ಮ ಈ ಪ್ರಯತ್ನ ಸಾರ್ಥಕವಾಗಲಿದೆ ಎಂದು ಎಸ್.ಎನ್.ಪಂಜಾಜೆ ಬೆನ್ನುಡಿಯಲ್ಲಿ ಬರೆದಿದ್ದಾರೆ.
©2024 Book Brahma Private Limited.