ಲೇಖಕ ಕಬ್ಬಿನಾಲೆ ವಸಂತ ಭಾರದ್ವಾಜ ಅವರ ಕೃತಿ ವಸಂತಷೋಡಶಿ. ಈ ಕೃತಿಯಲ್ಲಿ ಭಾನುಮತಿಯ ನೆತ್ತ, ರಾಮಾನುಜವಿಜಯ, ವಾದಿರಾಜಚರಿತೆ, ಅಲ್ಲಮದರ್ಶನ, ಅಹಿಂಸಾಶ್ವಮೇಧ, ಮುಂತಾದ ಹದಿನಾರು ಯಕ್ಷಗಾನ ಕಾವ್ಯಗಳಿವೆ. ಕಾವ್ಯರತ್ನ ದೇ.ಜವರೇಗೌಡ ಅವರು ಈ ಕೃತಿಗೆ ಬೆನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಡಾ. ಕಬ್ಬಿನಾಲೆ ವಸಂತ ಭಾರದ್ವಾಟರು ರಚಿಸಿದ ಯಕ್ಷಗಾನ ಉವ್ಯಗಳನ್ನು ಓದಿ ನಾನು ಆನಂದತುಂದಿಲನಾಗಿದ್ದೇನೆ. ವೈವಿಧ್ಯಪೂರ್ಣ ಛಂದೋಬಂಧಗಳನ್ನು ಬಳಸಿ ಅವರು ಕನ್ನಡಕಾವ್ಯಕನ್ನೆಗೆ ಬಂಗಾರದ ಗೆಜ್ಜೆಯನ್ನೇ ತೊಡಿಸಿದ್ದಾರೆ. ಪದಪ್ರಯೋಗ ಪರಿಣತಿ, ವರ್ಣನಾಕೌಶಲ, ಪ್ರಾಸಾಲಂಕಾರಗಳ ಚೆಲುವಿನಿಂದ ನರ್ತಿಸುವ ಅವರ ಕಾವ್ಯಮಯೂರಿಯನ್ನು ಕಂಡಾಗ ಯಾರಿಗಾದರೂ ಮನಸೂರೆಯಾಗುವುದು ಸಹಜ, ಸ್ವಾಭಾವಿಕ, ಮುದ್ದಣ, ರತ್ನಾಕರವರ್ಣಿಯರ ಕವಿಚೈತನ್ಯ ಕಬ್ಬಿನಾಲೆಯವರ ಕಬ್ಬಗಳಲ್ಲಿ ಮರುಮೆಯ್ಯಾಂತುಕೊಂಡಿದೆ ಎಂದರೆ ಆತಿಶಯೋಕ್ತಿಯಲ್ಲ. ಶಾಸ್ತ-ಕಾವ್ಯಕಲಾಸೃಜನೆಯ ಪಾಂಡಿತ್ಯ ಪ್ರತಿಭೆಗಳ ಈ ಸವ್ಯಸಚಿಗೆ ಕನ್ನಡ ಜನಮನದ ಹಾರ್ದಿಕ ಅಭಿನಂದನೆಗಳು ಎಂದಿದ್ದಾರೆ.
©2024 Book Brahma Private Limited.