ಬಾಲ್ಯದಿಂದಲೂ ಯಕ್ಷಗಾನದ ಬಗ್ಗೆ ಆಸಕ್ತಿ ಹೊಂದಿದ್ದ ಆನಂದರಾಮ್ ಉಪಾಧ್ಯಯರು ಅದೇ ವಿಷಯಕ್ಕೆ ಸಂಬಂಧಿಸಿದಂತೆ ಸಂಶೋಧನೆ ನಡೆಸಿ ಪಿಎಚ್ಡಿ ಪಡೆದಿದ್ದಾರೆ. ಯಕ್ಷಗಾನ ರಾಮಾಯಣ ಪ್ರಸಂಗಗಳು 68ಕ್ಕೂ ಅಧಿಕವಿದ್ದರೂ ಕರಾವಳಿಯಲ್ಲಿ ಪ್ರಚಲಿತವಿರುವ ಪ್ರಸಂಗಗಳನ್ನು ಅಧ್ಯಯನಕ್ಕೆ ಸೀಮಿತಗೊಳಿಸಲಾಗಿದೆ. ಅಧ್ಯಯನವನ್ನು ಒಂದು ನಿರ್ದಿಷ್ಟವಾದ ಸಾಂಸ್ಕೃತಿಕ, ಪ್ರಾದೇಶಿಕ ಭಾಷಿಕ ನೆಲೆಯಲ್ಲಿ ನಡೆಸಬೇಕೆಂಬುದು ಲೇಖಕರ ಉದ್ದೇಶ. ಆ ನೆಲೆಗಟ್ಟಿನಲ್ಲಿ ಸಂಶೋಧನೆ ಕೈಗೊಂಡ ಅವರು ಡಾ. ಕೆ. ಎಂ. ಕೃಷ್ಣರಾವ್ ಅವರ ಮಾರ್ಗದರ್ಶನದಲ್ಲಿ ತಮ್ಮ ಪ್ರಬಂಧವನ್ನು ಮಂಡಿಸಿ ಪಿಎಚ್ಡಿ ಪದವಿಗಳಿಸಿದ್ದಾರೆ. ಅವರ ಪ್ರಬಂಧವನ್ನೇ ಪುಸ್ತಕರೂಪಕ್ಕೆ ಅವಳವಡಿಸಲಾಗಿದೆ
©2024 Book Brahma Private Limited.