ಜಯಚಾಮರಾಜ ಒಡೆಯರ್ ಅವರಿಗೆ ಅದ್ವೈತ ತತ್ತ್ವಶಾಸ್ತ್ರದಲ್ಲಿದ್ದ ಪಾಂಡಿತ್ಯ, ಒಲವು ಪುಸ್ತಕವಾಗಿ ಹೊರಹೊಮ್ಮಿದೆ. ಮೋಕ್ಷದ ವಿಷಯದಲ್ಲಿ ಜ್ಞಾನಮಾರ್ಗಕ್ಕೆ ಹೆಚ್ಚಿನ ಒತ್ತುಕೊಟ್ಟು, ಮೀಮಾಂಸಕರ ವಾದವನ್ನು ತಳ್ಳಿಹಾಕುತ್ತಾರೆ. ಪೂಜ್ಯನೂ ಪೂಜಕನೂ ಒಂದೇ ಆಗುವುದೇ ನಿಜವಾದ ಪೂಜೆ ಮತ್ತು ಇದಕ್ಕೆ ಉಪನಿಷತ್ತುಗಳ ಮಹಾವಾಕ್ಯಗಳು ಸಹಾಯಮಾಡುತ್ತವೆ ಎಂಬುದನ್ನು ಅವರು ಪ್ರತಿಪಾದಿಸಿದ್ದಾರೆ. ಒಟ್ಟಿನಲ್ಲಿ ಒಂದು ಸಣ್ಣದಾದ ಪರಿಧಿಯಲ್ಲಿ ಮಹಾರಾಜರು ಅದ್ವೈತದ ದೃಷ್ಟಿಯಲ್ಲಿ ಆತ್ಮ ಮತ್ತು ಬ್ರಹ್ಮನನ್ನು ಕುರಿತು ಸರಳವಾಗಿ ಮತ್ತು ಅಷ್ಟೇ ಸ್ಪಷ್ಟವಾಗಿ ಪ್ರತಿಪಾದಿಸಿದ್ದಾರೆ. ಈ ಕೃತಿಯನ್ನು ಹೆಚ್.ವಿ.ನಾಗರಾಜ ರಾವ್ ರವರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ.
©2024 Book Brahma Private Limited.