‘ತ್ಯಾಗರಾಜ್ ಕಾಲೋನಿ’ ಡಿಟೆಕ್ವಿವ್ ಹಿಮವಂತನ ಕೆಂಪು ಗುಲಾಬಿ ಕೇಸು, ಲೇಖಕ ಕೌಶಿಕ್ ಕೂಡುರಸ್ತೆ ಅವರ ಪತ್ತೇದಾರಿ ಕಾದಂಬರಿ. ಇದು ಕೌಶಿಕ್ ಅವರ ಮೂರನೆಯ ಪತ್ತೇದಾರಿ ಕಾದಂಬರಿಯಾಗಿದ್ದು, ಪತ್ತೇದಾರಿ ಸಾಹಿತ್ಯಕ್ಕೆ ಓದುಗರಿಲ್ಲ ಎಂಬ ಮಾತುಗಳನ್ನು ಈ ಹಿಂದಿನ ಎರಡು ಕಾದಂಬರಿಗಳು ಸುಳ್ಳುಮಾಡಿದ್ದು ಇಂದಿನ ಯುವ ಸಮುದಾಯಕ್ಕೆ ಒಳ್ಳೆ ರುಚಿಸುವ ಕತೆಗಳನ್ನು ನೀಡಿದರೆ ಒಪ್ಪಿ ಅಪ್ಪುತ್ತಾರೆ ಎಂಬುದನ್ನು ಬಲವಾಗಿ ನಂಬಿದ್ದೇನೆ ಎನ್ನುತ್ತಾರೆ.
ಲಾಕ್ ಡೌನ್ ಸಮಯದಲ್ಲಿ ಹೊಳೆದ ಎಳೆಯೊಂದಕ್ಕೆ ಥ್ರಿಲ್ಲಿಂಗ್ ಅಂಶಗಳನ್ನು ಸೇರಿಸಿ ಕಾದಂಬರಿಯಾಗಿಸಿದ್ದೇನೆ ಎಂದು ತಿಳಿಸಿದ್ದಾರೆ. ಹಾಗೆಯೇ ದಿನಪತ್ರಿಕೆಗಳಲ್ಲಿ ಓದಿದ ಕೆಲವು ನೈಜ ಘಟನೆಗಳನ್ನು ಇಲ್ಲಿ ಬಳಸಿಕೊಂಡಿದ್ದೇನೆ. ಇದೊಂದು ಕಾಲ್ಪನಿಕ ಕತೆಯಾಗಿದ್ದು ಯಾರ ಬದುಕಿಗೂ ಇದು ಸಂಬಂಧಿಸಿರುವುದಿಲ್ಲ ಎಂದು ತಿಳಿಸಿದ್ದಾರೆ.
©2025 Book Brahma Private Limited.