ನಾಳೆಯನ್ನು ಗೆದ್ದವನು

Author : ಸಿ.ಎಸ್. ನಾಗೇಶ್ ಕುಮಾರ್

Pages 128

₹ 90.00




Year of Publication: 2017
Published by: ನ್ಯೂ ವೇ ಬುಕ್
Address: 90/3 ಮೊದಲನೇ ಮಹಡಿ, ಈಟ್‌ ಸ್ಟ್ರೀಟ್‌, ಬಸವನಗುಡಿ, ಬೆಂಗಳೂರು - 560004
Phone: 9448788222

Synopsys

ಇಂಟೆಲಿಜೆನ್ಸ್ ಬ್ಯೂರೋ ಉಪ ನಿರ್ದೇಶಕ ಅಭಿಮನ್ಯು ಸಾಲಿಯಾನ್ ಜನವರಿ 1, 2050 ರ ಬೆಳಿಗ್ಗೆ ನಂದಿಬೆಟ್ಟದಿಂದ ಕಾರಿನಲ್ಲಿ ಬರುತ್ತಿರಲು ಬೃಹತ್ ಗಾತ್ರದ ಲೋಹದ ಗೋಲಾಕಾರದ ಒಂದು ಗಗನನೌಕೆ ಅವನೆದುರು ಆಗಸದಲ್ಲಿ ಕಂಡುಬಂದು ಅವನನ್ನು ಬಲವಂತವಾಗಿ ಒಳಕ್ಕೆ ಸೆಳೆದೊಯ್ಯುತ್ತದೆ. ಆರು ಆಯಾಮಗಳಲ್ಲಿ ಇದ್ದು ಮಾನವನ ಕಣ್ಣಿಗೇ ಬೀಳದಂತೆ ಇರುವ ಬಿಲಿಯನ್ ಜ್ಯೊತಿವರ್ಷ ಕಾಲ ಮುನ್ನೆಡೆದಿರುವ ಈ ಅನ್ಯಗ್ರಹ ಜೀವಿ ತಂಡದ ಕ್ಯಾಪ್ಟನ್ ಏಸ್ ಮಾನವರೂಪದ ಹೋಲೋಗ್ರಾಮಿನಲ್ಲ್ಲಿ ಎದುರಾಗಿ ತಾವು ಕಾಲ-ದೇಶಗಳ ಸೃಷ್ಟಿಯ ಮರ್ಮವನ್ನು ಭೇಧಿಸಿದವರೆಂದೂ, ತಾವು ಇಚ್ಚಾಬಲದಿಂದಲೇ ಮಾನವನಿಗೆ ಇಂದು ನಂಬಲಸಾಧ್ಯವಾದ ವೈಜ್ಞಾನಿಕ ಸಾಧನೆ ಪವಾಡಗಳನ್ನು ಮಾಡಿ ಉದಾಹರಣೆ ಕೊಟ್ಟು ಅಭಿಮನ್ಯುವಿಗೆ ಅಂದು ಸಂಜೆಯೊಳಗೆ ತಾವು ಕಂಡ ಒಂದು ಭಯೋತ್ಪಾದಕರ ಜಾಲದ ಬಗ್ಗೆ ಮಾಹಿತಿ ನೀಡುತ್ತಾರೆ. ಅವನನ್ನು ಕಾಲಮಾನದಲ್ಲಿ ಹಿಂದಿನ ದಿನಕ್ಕೆ ಭೂಮಿಗೆ ಕೊಂಡೊಯ್ದು ಬಿಡಲು ಒಂದು ವರ್ಮ್ ಹೋಲ್ ಅಥವಾ ಹುಳುಹಾದಿ ಸುರಂಗವನ್ನು ಅಂತರಿಕ್ಷದಲ್ಲಿ ಸೃಷ್ಟಿಸಿ ಕೊಡಬಲ್ಲೆವೆಂದೂ ಹೇಳಿ ಅವನಿಂದ ಒಂದು ದಿಟ್ಟ ಸಾಹಸವನ್ನು ಕೋರುತ್ತಾರೆ...ಮುಂದೇನಾಯಿತು, ನೀವೇ ಓದಿ ನೋಡಿ

About the Author

ಸಿ.ಎಸ್. ನಾಗೇಶ್ ಕುಮಾರ್

ಹವ್ಯಾಸಿ ದ್ವಿಭಾಷಾ ಬರಹಗಾರ ನಾಗೇಶ್ ಕುಮಾರ್ ಸಿ.ಎಸ್‌. ಅವರು ಜನಿಸಿದ್ದು ಬೆಂಗಳೂರಿನಲ್ಲಿ. ಸಿವಿಲ್ ಇಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಚೆನ್ನೈ ನಗರದ ಬಹುರಾಷ್ಟ್ರೀಯ ಸಂಸ್ಥೆಯೊಂದರಲ್ಲಿ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಬರೆದ ಸಣ್ಣ ಕತೆ, ಕಿರು ಕಾದಂಬರಿಗಳು ತರಂಗ, ತುಷಾರ ಉತ್ಥಾನ, ಸುಧಾ, ಕರ್ಮವೀರ ಸೇರಿದಂತೆ ಹಲವಾರು ನಿಯತಕಾಲಿಕಗಳಲ್ಲಿ ಪ್ರಕಟವಾಗಿದೆ. ರಕ್ತಚಂದನ, ನಾಳೆಯನ್ನು ಗೆದ್ದವನು ಇವರ ಪ್ರಮುಖ ಕೃತಿಗಳು. ‘ಕರಾಳ ಗರ್ಭ’ ಅವರ ಆಡಿಯೋ ಪುಸ್ತಕ ಇತ್ತೀಚೆಗೆ ಬಿಡುಗಡೆಗೊಂಡಿದ್ದು ಕೇಳುಗರಿಂದ ಮೆಚ್ಚುಗೆ ಪಡೆದಿದೆ. ...

READ MORE

Related Books