ಲೇಖಕ ಸಿ.ಎಸ್. ನಾಗೇಶ್ ಕುಮಾರ್ ಅವರ ಪತ್ತೆದಾರಿ ಕಾದಂಬರಿ ಕೃತಿ ʻಮುಳುಗುವ ಕೊಳʼ. ಇಲ್ಲಿ, ಅಂಚನಾ ಮತ್ತು ಕಂಚನಾ ಎಂಬ ಅವಳಿ ಜವಳಿ ಅಕ್ಕ ತಂಗಿಯಂದಿರ ಕುರಿತಾಗಿ ಹಾಗೂ ಒಂದು ದಿನ ಸಂಶಯಾಸ್ಪದವಾಗಿ ಈಜುಕೊಳದಲ್ಲಿ ಬಿದ್ದು ಸಾಯುವ ಅಕ್ಕನ ಸಾವಿನ ಹಿಂದಿನ ರಹಸ್ಯದ ಬಗ್ಗೆ ಕತೆಯನ್ನು ಹೆಣೆಯಲಾಗಿದೆ. ಸಾಯುವ ಮೊದಲು ಅಕ್ಕ, ತಂಗಿಯ ಹೆಸರಿನಲ್ಲಿ ಸುಮಾರು ಐದು ಲಕ್ಷದಷ್ಟು ರೂ. ಜೀವ ವಿಮಾ ಕೂಡಿಟ್ಟಿದ್ದು, ಆದರೆ ಆಕೆಯ ಅಕಾಲಿಕ ಮರಣ ಎಲ್ಲರನ್ನೂ ತಬ್ಬಿಬ್ಬಾಗಿಸುತ್ತದೆ. ಬಳಿಕ ಪತ್ತೆದಾರನ ಮೂಲಕ ಅದರ ಸತ್ಯಾಸತ್ಯತೆಗಳನ್ನು ತಿಳಿಯಲು ಮುಂದಾಗುತ್ತಿದ್ದ ಹಾಗೆ ತೆರೆದುಕೊಳ್ಳುವ ಕುತೂಹಲಕಾರಿ ರಹಸ್ಯಗಳು ಕತೆಗೆ ತಿರುವನ್ನು ನೀಡುತ್ತಾ ಹೋಗುತ್ತದೆ.
©2025 Book Brahma Private Limited.