ಲೇಖಕರಾದ ಅನುಷ್ ಎ ಶೆಟ್ಟಿಯವರ ಕಾದಂಬರಿ ಜೋಡ್ಪಾಲ.
ಮಡಿಕೇರಿಯಿಂದ ಮಂಗಳೂರಿಗೆ ಇಳಿಯುವ ಘಾಟಿಯ ಒಂದು ಪುಟ್ಟ ಊರೇ ಜೋಡ್ಪಾಲ. ಆ ಘಾಟಿಯಲ್ಲಿ ನಡೆಯುವ ವಿಚಿತ್ರ ಘಟನೆಗಳು, ಹಾಗು ಆ ಘಟನೆಗಳಿಗೆ ಹೆಣೆದುಕೊಂಡಿರುವ ರೋಚಕ ತಿರುವುಗಳೇ ಈ ಕಾದಂಬರಿಯ ತಿರುಳು. ಒಂದು ಜೋಡ್ಪಾಲ ಘಾಟಿನಲ್ಲಿ ಒಂದು ಲಾರಿ ಬಿದ್ದು ಅಪಘಾತವಾಗುತ್ತದೆ. ಅದರ ಮಾರನೆಯ ದಿನ ಇದ್ದಕ್ಕಿದ್ದಂತೆ ಏನೇನೋ ಘಟನೆಗಳು ನಡೆಯುತ್ತವೆ. ರಾಬರ್ಟ್, ಪೆಮ್ಮಯ್ಯ ಮತ್ತು ಕಿಟ್ಟಿ, ರಾಜು ಎಂಬ ಗೆಳೆಯರು ಕಾಣೆಯಾಗುತ್ತಾರೆ. ಕಿಟ್ಟಿಗೆ ಅವನ ಆಪ್ತ ಗೆಳೆಯ ಭೀಮನ ತೆಕ್ಕೆಯಲ್ಲಿ ಕೆಂಪು ಹರಳಿನ ಸರ ಸಿಗುತ್ತದೆ. ಹೀಗೆ ಕೆಲವು ವಸ್ತುಗಳಿಂದ ಕಾದಂಬರಿಯು ಹೊಸ ತಿರುವು ಪಡೆಯುತ್ತಾ ಕುತೂಹಲ, ಮತ್ತು ವಿಸ್ಮಯಕಾರಿ ಘಟನೆಗಳನ್ನು ಓದುಗರ ಮುಂದಿಡುತ್ತದೆ. ಕಳುವಾದ ಸರ ಮಡಿಕೇರಿಗೆ ಹೇಗೆ ಬಂತು ? ಕಾಣೆಯಾದವರಿಗೂ ಅಪಘಾತಕ್ಕೂ ಸಂಬಂಧಗಳೇನು ಎಂಬ ಪ್ರಶ್ನೆಗಳು ಓದುಗರ ಸುತ್ತ ಕುತೂಹಲ ಹುಟ್ಟಿಸುವಂತದ್ದಾಗಿದೆ.
ಜೋಡ್ಪಾಲ ಕಥೆ ಶುರುವಾಗುವ ಮುನ್ನ
©2024 Book Brahma Private Limited.