ಲೇಖಕಿ ಸುಚೇತಾ ಗೌತಮ್ ಅವರ ಕಾದಂಬರಿ ಕೃತಿʻಹಾವು ಮತ್ತು ಏಣಿʼ. ಪುಸ್ತಕದ ವಸ್ತುವು ಒಂದು ಕಡೆ ಇಂದಿನ ರಾಜಕೀಯಕ್ಕೆ ಕನ್ನಡಿ ಹಿಡಿದರೆ ಇನ್ನೊಂದು ಕಡೆ ಗಣಿಗಾರಿಕೆಯಿಂದ ಒಂದು ಸಮಾಜದ ಅಧಿಪತನಕ್ಕೆ ಕನ್ನಡಿ ಹಿಡಿಯುತ್ತದೆ. ಹಾಗಾಇ ಇದು ಒಂದು ಸಾಮಾಜಿಕ ಕಾದಂಬರಿಯೂ ಹೌದು ಪತ್ತೇದಾರಿ ಕಾದಂಬರಿಯೂ ಹೌದು. ತಗದೂರಿನ ಸುರೇಶ ಗೌಡನನ್ನು ಪೊಲೀಸರು ಕೊಂದಿದ್ದಾರೆ, ಅದರ ಬಗ್ಗೆ ತನಿಖೆ ನಡಿಸಿ ನಮಗೆ ನ್ಯಾಯ ಕೊಡಿಸ ಎಂದು ಅವನ ಕುಟುಂಬದ ಸದಸ್ಯರು ಬೆಂಗಳೂರಿನಲ್ಲಿ ಧರಣಿಗೆ ಕೂರುತ್ತಾರೆ. ಹೀಗೆ ಹೇಳುತ್ತಾ ಲಖಕರು ಓದುಗರಲ್ಲಿ ಕುತೂಹಲ ಮೂಡಿಸುತ್ತಾ ಕಾದಂಬರಿಯ ಹೇಳಲು ಕತೆಯನ್ನು ಶುರುಮಾಡುತ್ತಾರೆ. ಈ ಕತೆಯಲ್ಲಿ ತಗದೂರಿನ ಸುರೇಶ ಗೌಡ, ಪೊಲೀಸರು, ಎಮ್.ಎಲ್.ಎ ಮಲ್ಲೇಶಿ, ಕಡು ವೈರಿಗಳಾದ ಸೋಮಣ್ಣ ಹಾಗೂ ಪರಮೇಶ್ವರಪ್ಪ, ಪತ್ರಕರ್ತ ರಾಜೇಶ, ಸೈಬರ್ ಕ್ರೈಮ್ ಸ್ಪೆಷಲ್ ಆಫೀಸರ್ ವೇಣು ಹೀಗೆ ಒಂದರ ಮೇಲೊಂದರಂತೆ ಪಾತ್ರಗಳು ಕಾಣಿಸಿಕೊಳ್ಳುತ್ತಾ ಹೋದಂತೆ ಓದುಗನಲ್ಲಿ ಕತೆಯ ಬಗೆಗಿನ ಕುತೂಹಲ ಮತ್ತಷ್ಟು ಹೆಚ್ಚಾಗುತ್ತದೆ.
©2025 Book Brahma Private Limited.