ಕಸ್ ಸ್ ಸ್ ಸ್ ಸ್ಸಕ್

Author : ಯಂಡಮೂರಿ ವೀರೇಂದ್ರನಾಥ್

₹ 140.00




Published by: ಕಾರ್ತಿಕ್ ಎಂಟರ್ಪ್ರೈಸಸ್

Synopsys

ಮೂಲತಃ ತೆಲುಗುವಿನಲ್ಲಿ ಯರ್ರಂ ಶೆಟ್ಟಿ ಶಾಯಿಯವರು ಬರೆದಿರುವ ಏಕತೆಯನ್ನು ಕನ್ನಡಕ್ಕೆ ರಾಜಾ ಚೆಂಡೂರ್ ಅನುವಾದ ಮಾಡಿದ್ದಾರೆ. ಕೃತಿಯು ಕ್ರೈಂ ಕಥೆಯನ್ನ ಆಧರಿಸಿರುವುದು ಮಾತ್ರವಲ್ಲ, ವ್ಯಕ್ತಿಯೊಬ್ಬನಿಗೆ ಮೋಸ, ಅನ್ಯಾಯ ಮಾಡಿದವರ ವಿರುದ್ಧ ಆತ ಸೇಡು ತೀರಿಸಿಕೊಂಡ ಕಥೆಯೂ ಹೌದು.

"ಎಲ್ಲೆಲ್ಲಿ ಭ್ರಷ್ಟಾಚಾರ, ಭೂ ಮಾಫಿಯಾ, ಡ್ರಗ್ ಮಾಫಿಯಾ ಇಲ್ಲ ಅಂತ ಹೇಳಿ...!". ಎಲ್ಲಾ ಸರ್ಕಾರಿ ಡಿಪಾರ್ಟ್ಮೆಂಟ್'ನಲ್ಲೂ ಒಂದಷ್ಟು ಜನರು ಇಂಥವರಿಗೆ ಕೈ ಜೋಡಿಸಿರುತ್ತಾರೆ. "ಇವರು ಮಾತ್ರನಾ!''. ಖಂಡಿತ ಇಲ್ಲ.. "ರಾಜಕೀಯದವರು.... ಅದರಲ್ಲೂ ರಾಜಕೀಯದಲ್ಲಿ ಉನ್ನತ ಸ್ಥಾನದಲ್ಲಿರುವವರು.... ಇಂಥವರ ಜೊತೆ ಸೇರಿದರೆ.... ಎಲ್ಲಿಯ ನ್ಯಾಯ...?''. ಪೋಲಿಸ್ ಡಿಪಾರ್ಟ್ಮೆಂಟ್ ಇರೋದೆ ಜನರಿಗೆ ನ್ಯಾಯ ಒದಗಿಸಲು. ಆದರೆ ಇದರಲ್ಲಿ ಹಲವಾರು ಉನ್ನತ ಹುದ್ದೆಯಲ್ಲಿ ಇರುವವರು ಕೂಡ ಹಣದಾಸೆಗಾಗಿ ನ್ಯಾಯ ಕೊಡುವ ಬದಲು ಅನ್ಯಾಯ ಅವರಿಗೆ ಮತ್ತಷ್ಟು ಅನ್ಯಾಯ ಆಗುವಂತೆ ಮಾಡುತ್ತಾರೆ..... ಎಲ್ಲೋ ಒಂದಿಬ್ಬರು ಒಳ್ಳೆಯವರು ಇದ್ದರೂ ಅವರು ಏನು ಮಾಡಲಾಗದೆ ಕೈಕಟ್ಟಿ ಕುಳಿತಕೊಳ್ಳವಂತ ಪರಿಸ್ಥಿತಿಯನ್ನು ಅವರ ಹಿರಿಯ ಅಧಿಕಾರಿಗಳು, ಉನ್ನತ ಸ್ಥಾನದಲ್ಲಿರುವ ರಾಜಕೀಯ ವ್ಯಕ್ತಿಗಳು ಮಾಡಿಬಿಡುತ್ತಾರೆ. " ಚಿರಂಜೀವಿ..." ಹತ್ತು ವರ್ಷಗಳ ತಾನು ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸಿ ಜೈಲಿನಿಂದ ಹೊರಬರುತ್ತಾನೆ... ಮೊದಲು ಅವನು ಕೊಂಡುಕೊಳ್ಳುವುದೇ ಒಂದು ಹರಿತವಾದ ಚೂರಿಯನ್ನು ..... ತನ್ನ ವಿರುದ್ಧ ಸಂಚು ಮಾಡಿದವರಿಗೆ ಕಸ್ ಸ್ ಸ್ ಸ್ಸಕ್ ಎಂದು ಚೂರಿ ಇರಿಯುವವುದು. 10 ವರ್ಷದ ನಂತರ ಹೊರಪ್ರಪಂಚಕ್ಕೆ ಬಂದ ಚಿರಂಜೀವಿಗೆ ಹೈದರಾಬಾದ್ ಹೊಸತಾಗಿ ಕಾಣಿಸುತ್ತದೆ. ಮೊದಲು ತನ್ನ ಮನೆ ಇರುವ ಜಾಗಕ್ಕೆ ಹೋಗಿ ನೋಡಿದಾಗ ಅಲ್ಲಿ ತಮ್ಮ ಮನೆ ಇರದೆ ಎತ್ತರವಾದ ಕಟ್ಟಡಗಳು, ಪ್ಲಾಟ್ಗಳು ತಲೆಯೆತ್ತಿದ್ದವು. ಈ ಜಾಗಕ್ಕಾಗಿ ಅಲ್ವಾ ತಾನು ತನ್ನವರನ್ನು ಕಳೆದುಕೊಂಡಿದ್ದು.... ಪ್ರಸಾದ ಎಂಬ ಲಾಯರ್ ನ ಸುಳ್ಳು ಕೇಸಿನಿಂದ ತಾನು ಜೈಲು ಪಾಲಾಗುವಂತೆ ಆಗಿದ್ದು. ಪೊಲೀಸ್ ಇನ್ಫಾರ್ಮರ್ ಆಗಿದ್ದನು. ಚಿರಂಜೀವಿ ಕೇವಲ ಇನ್ಫಾರ್ಮರ್ ಅಲ್ಲ ಎಸಿಪಿ ಕಲ್ಯಾಣರಾವ್ ಅವರ ಸೊಸೆಯ ಕಿಡ್ನಾಪ್ ಆದಾಗ ಬಹು ಚಾಣಕ್ಯತನದಿಂದ ಹೊರಗಡೆ ಬೇರೆ ಯಾರಿಗೂ ತಿಳಿಯದಂತೆ.... ಆ ಕೇಸ್ ತಾನೇ ಸಾಲ್ವ್ ಮಾಡುತ್ತಾನೆ . ಇಷ್ಟೇ ಅಲ್ಲ ಎಷ್ಟೆಷ್ಟೋ ಸೀಕ್ರೆಟ್ ಇನ್ಫಾರ್ಮಶನ್ ಡಿಪಾರ್ಟ್ಮೆಂಟಿಗೆ ಕೊಟ್ಟಿರುತ್ತಾನೆ. ಯಾವಾಗಲೂ ನ್ಯಾಯದ ಪರ ಮಾತನಾಡುವ ಅವನನ್ನು ಕಂಡರೆ ಕೆಲವರಿಗೆ ಅಸೂಯೆ, ದ್ವೇಷ ಇರುತ್ತದೆ. ಅಲ್ಲಿನ ಕೆಲವು ಅಧಿಕಾರಿಗಳು ಅಂಡರ್ವರ್ಲ್ಡ್ ,ಭೂಮಾಫಿಯಾದವರ ಪರ ಕೈಜೋಡಿಸಿ ತನ್ನ ವಿರುದ್ಧವೇ ನಿಂತು ನಾನು ಬಹಳ ಕಷ್ಟಪಟ್ಟು ಮಾಡಿದ್ದ ಉನ್ನತ ಪೊಲೀಸ್ ಅಧಿಕಾರಿಗಳು, ರಾಜಕೀಯದವರು ಶಾಮೀಲಾಗಿದ್ದ ಅಂಡರ್ ವರ್ಲ್ಡ್ ಡಾನ್ ದಾವೂದ್ ಪಾರ್ಟಿಯ ವಿಡಿಯೋವನ್ನು ಪಡೆದು ನಾಶ ಮಾಡಲು ಪ್ರಯತ್ನಿಸುತ್ತಾರೆ. ಆದರೆ ಆ ಸಮಯದಲ್ಲಿ ಚಿರಂಜೀವಿ ಊಹಿಸಿರದ ರೀತಿಯಲ್ಲಿ ಅರೆಸ್ಟ್ ಆಗುತ್ತಾನೆ. ಹತ್ತು ವರ್ಷದ ನಂತರ ಜೈಲಿನಿಂದ ಹೊರಬಂದವನಿಗೆ ತನ್ನ ತಂದೆ ತಂಗಿಯನ್ನು ಕೊಂದವರನ್ನು, ಸಮಾಜಘಾತುಕರನ್ನು ಮಟ್ಟಹಾಕುವ ಪ್ಲಾನ್ ಮಾಡುತ್ತಾನೆ..... ತನ್ನವರೇ ತನಗೆ ಮೋಸ ಮಾಡಿದ್ದಾರೆ ಅಂದುಕೊಂಡ್ಡಿದ್ದು ಸುಳ್ಳು ಅದು ತನ್ನ ಒಳಿತಿಗಾಗಿ ಅಂತ ತಿಳಿದಾಗ ಸ್ವಲ್ಪ ನಿರಾಳವಾಗುತ್ತಾನೆ. ಅವರ ಸಹಾಯದಿಂದಲೇ ಸಮಾಜಘಾತುಕರ ನಿರ್ಣಾಮ ಮಾಡುತ್ತಾನೆ.... ಹೇಗೆ ಅಂತ ತಿಳಿಯಲು ಪುಸ್ತಕ ಓದಲೇಬೇಕು.... ಸಮಾಜದಲ್ಲಿ ನಡೆಯುವಂತಹ ಘಟನೆಗಳೇ ಅಂತ ಅನಿಸುತ್ತದೆ ಕಥೆ ಓದಿದಾಗ.... ಭ್ರಷ್ಟ ರಾಜಕಾರಣಿಗಳು ಭ್ರಷ್ಟ ಅಧಿಕಾರಿಗಳು ಇರುವಾಗ ಅದೆಷ್ಟು ಜನರು ಹೀಗೆ ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸಿದ್ದಾರೊ...!?. ಅಥವಾ ಬಾಯಿ ಮುಚ್ಚಿಕೊಂಡು ಕುಳಿತಿದ್ದಾರೋ...!

About the Author

ಯಂಡಮೂರಿ ವೀರೇಂದ್ರನಾಥ್

ತೆಲುಗಿನ ಖ್ಯಾತ ಲೇಖಕ, ಕಾದಂಬರಿಕಾರ ಯಂಡಮೂರಿ ವೀರೇಂದ್ರನಾಥ್ ಅವರ ಬಹುತೇಕ ಕೃತಿಗಳು ಕನ್ನಡದಲ್ಲೂ ಅನುವಾದಗೊಂಡು ಜನಪ್ರಿಯವಾಗಿವೆ. ಇವರ ಕೃತಿಗಳನ್ನು ವಂಶಿ, ಸರಿತಾ ಜ್ಞಾನಾನಂದ, ಬೇಲೂರು ರಾಮಮೂರ್ತಿ, ರವಿ ಬೆಳಗೆರೆ, ಯತಿರಾಜ್ ವೀರಾಂಬುದಿ ಮುಂತಾದವರು ಕನ್ನಡಕ್ಕೆ ಅನುವಾದಿಸಿದ್ದಾರೆ. ...

READ MORE

Related Books