ಖ್ಯಾತ ಕಾದಂಬರಿಕಾರ ಟಿ.ಕೆ. ರಾಮರಾವ್ ಅವರ ಕಾದಂಬರಿ-ಸೇಡಿನ ಹಕ್ಕಿ. ಈ ಪತ್ತೆದಾರಿ ಕಾದಂಬರಿಯು 1980 ಹಾಗೂ 2010 ಹೀಗೆ ಎರಡು ಆವೃತ್ತಿಗಳಲ್ಲಿ ಮುದ್ರಣಗೊಂಡಿತ್ತು. ಹೆಚ್ಚು ಪಾತ್ರಗಳಿಲ್ಲದ ಕಾದಂಬರಿಯು ವಸ್ತುವಿನಲ್ಲಷ್ಟೇ ಕೇಂದ್ರೀಕೃತಗೊಂಡಿದೆ. ಸೇಡಿನ ಬೆನ್ನು ಹತ್ತುವುದು ವ್ಯರ್ಥ ಶ್ರಮ ಎಂಬುದು ಈ ಕಾದಂಬರಿಯ ತಿರುಳು. ಎಲ್ಲಕ್ಕಿಂತ ಮಾನವೀಯತೆ ಹೆಚ್ಚು ಎಂಬ ಸಂದೇಶ ನೀಡುತ್ತದೆ. ಚೈತಾಲಿ ಎಂಬ ಮಹಿಳೆ ಈ ಕಾದಂಬರಿಯ ನಾಯಕಿ. ಓದುಗರ ಕುತೂಹಲ ಕೆರಳಿಸುವ ಕಾದಂಬರಿಯು ಸಾಮಾಜಿಕ ವಿದ್ಯಮಾನಗಳಿಂದಲೇ ಅಧ್ಯಾತ್ಮಿಕ ಕೆಲವು ಹೊಳವುಗಳನ್ನು-ತತ್ವ-ಸಿದ್ಧಾಂತಗಳನ್ನು ಸ್ಮರಿಸಿಕೊಳ್ಳುವಂತೆ ಮಾಡುತ್ತದೆ.
©2024 Book Brahma Private Limited.