ಪತ್ತೇದಾರಿ ಕೃತಿಗಳಿಗೆ ಸಾಹಿತ್ಯ ಲೋಕದಲ್ಲಿ ತನ್ನದೇ ಆದ ಸ್ಥಾನವಿದೆ. ಸಾಹಿತ್ಯ ಚರಿತ್ರೆಯಲ್ಲಿ ಆಗಾಗ ಹಿನ್ನೆಲೆಗೆ ಸರಿಯುತ್ತಲೂ ಮುನ್ನೆಲೆಗೆ ಬರುತ್ತಲೂ ಅದು ಸದ್ದು ಮಾಡುತ್ತಿರುತ್ತದೆ. ಕನ್ನಡದಲ್ಲಿಯೂ ಪತ್ತೇದಾರಿ ಕತೆಗಳದ್ದು ಇದೇ ಕತೆ. ಪತ್ತೇದಾರಿ ಸಾಹಿತ್ಯದ ಯುಗ ಮುಗಿಯಿತು ಅಂದುಕೊಳ್ಳುತ್ತಿರುವಾಗಲೇ ಆ ಪ್ರಕಾರದ ಕೃತಿಯೊಂದು ಧುತ್ತನೆ ಎದುರಾಗಿ ರೋಮಾಂಚನ ಹುಟ್ಟಿಸುತ್ತದೆ.
ಅಂತಹ ಒಂದು ಕಾದಂಬರಿ ಅಗಾಥ ಕ್ರಿಸ್ಟಿ ಬರೆದ ’ಬ್ಲಾಕ್ ಕಾಫಿ’. ಕಾರ್ಕಳ ಮೂಲದ ಲೇಖಕ ಅನು ಬೆಳ್ಳೆ ಇದನ್ನು ಕನ್ನಡಕ್ಕೆ ತಂದಿದ್ದಾರೆ. ಅನುವಾದ ಸಾಹಿತ್ಯದತ್ತ ಹೆಚ್ಚು ಗಮನ ಕೇಂದ್ರೀಕರಿಸಿರುವ ಸೃಷ್ಟಿ ಪ್ರಕಾಶನ ಕೃತಿಯನ್ನು ಪ್ರಕಟಿಸಿದೆ.
ವೈದ್ಯ ಕ್ಲಾಡ್ ಅಮೋರಿ ಕಂಡು ಹಿಡಿದ ಸ್ಫೋಟಕ ದ್ರವ್ಯವನ್ನು ಕಣ್ಣಾರೆ ಕಾಣಲು ಗೆಳೆಯರಿಬ್ಬರು ಆತನ ಮನೆಗೆ ಹೊರಡುತ್ತಾರೆ. ಆದರೆ ಅವರು ಮನೆ ತಲುಪುವಷ್ಟರಲ್ಲಿ ವೈದ್ಯನಿಗೆ ಬ್ಲಾಕ್ ಕಾಫಿಯಲ್ಲಿ ವಿಷ ಬೆರೆಸಿ ಕೊಲ್ಲಲಾಗಿರುತ್ತದೆ. ನಂತರದ್ದು ಕೊಲೆಗಾರನನ್ನು ಹುಡುಕುವ ಕೆಲಸ. ಅದರಲ್ಲಿ ಗೆಳೆಯರು ಯಶಸ್ವಿಯಾಗುತ್ತಾರೆಯೇ ಎಂಬುದು ಉತ್ತರಾರ್ಧ.
ನಾಟಕವಾಗಿಯೂ ಪ್ರಸಿದ್ಧವಾಗಿರುವ ಕೃತಿ ಕನ್ನಡದಲ್ಲಿ ಮೂಡಿಬಂದಿರುವುದು ಪ್ರಮುಖ ಸಂಗತಿ.
©2024 Book Brahma Private Limited.