1973ರಲ್ಲಿ ಬರೆದ ’ಕೀ ರಿಂಗ್’ ಕ್ಷಿತಿಜ ಬೀದರ ಅವರ ಮೊದಲ ಕಾದಂಬರಿ. ಆದರೆ ಪ್ರಕಟವಾದದ್ದು ಮಾತ್ರ 21 ನೇ ಕೃತಿಯಾಗಿ...! ಕುತೂಹಲದಿಂದ ಓದಿಸಿಕೊಂಡು ಹೋಗುವ 83 ಪುಟದ ಕಿರು ಕಾದಂಬರಿಯಿದು. ಕತೆಯನ್ನು ಸೊಗಸಾಗಿ ಹೆಣೆಯಲಾಗಿದೆ. ಉಪ್ಪು ತಿಂದವರು ಹೇಗೆ ನೀರು ಕುಡಿಯುತ್ತಾರೆ ಎಂಬುದನ್ನು ಸ್ಪಷ್ಟ ಪಡಿಸಲಾಗಿದೆ. ಕಾದಂಬರಿಯಲ್ಲಿ ಬಳಸಿರುವ ಭಾಷೆ ಚೆನ್ನಾಗಿದ್ದು ಕುತೂಹಲವನ್ನು ಕೊನೆಯವರೆಗೂ ಉಳಿಸಿಕೊಂಡಿದೆ. ಪಾತ್ರ ಪೋಷಣೆ ಚೆನ್ನಾಗಿದೆ. 1973ರಲ್ಲಿಯೇ ಮೊಬೈಲ್ ಕಲ್ಪನೆ ಕೀ ರಿಂಗ್ ಹೆಸರಿನಲ್ಲಿ ಕಾರ್ಯಗತ ಆಗಿರುವುದು ವಿಶೇಷ.
©2025 Book Brahma Private Limited.