BLR ಝೀರೋ ಮತ್ತು ಬೈನರಿ-ಸೈಬರ್ ಲೋಖದ ಅಪರಾಧ ಸರಣಿಯ ವಿಷಯ ವಸ್ತುವಿರುವ ಲೇಖಕಿ ಸುಚೇತಾ ಗೌತಮ್ ಅವರ ಪತ್ತೇದಾರಿ ಕಾದಂಬರಿ. ಬೆಂಗಳೂರಿನಲ್ಲಿ ನಡೆಯುವ ಸರಣಿ ಬಾಂಬ್ ಸ್ಫೋಟದ ಸುತ್ತ ಹೆಣೆದ ಕಥೆ. ಅಮೆರಿಕಾದ ಅಧ್ಯಕ್ಷರು ಭಾರತದ ಪ್ರವಾಸದ ಮೇಲೆ ಬಂದಿರುವರು. ಅವರನ್ನು ಸುರಕ್ಷಿತವಾಗಿ ಅಮೆರಿಕಾಕ್ಕೆ ಕಳಿಸುವ ಜವಾಬ್ದಾರಿ ಸೈಬರ್ ಕ್ರೈಮ್ ತಂಡದ ಮೇಲೆ ಏಕೆ ಬಿತ್ತು? ಹೀಗೆ ಕಥೆ ಬಿಚ್ಚಿಕೊಳ್ಳುತ್ತದೆ. ವಿಷಯ ವಸ್ತು, ನಿರೂಪಣಾ ಶೈಲಿ, ಸನ್ನಿವೇಶಗಳ ಜೋಡಣೆ, ಪಾತ್ರಗಳ ಸೃಷ್ಟಿ ಇತ್ಯಾದಿ ಸಾಹಿತ್ಯಕ ಅಂಶಗಳಿಂದ ಇಲ್ಲಿಯ ಕಥೆ ಓದುಗರ ಗಮನ ಸೆಳೆಯುತ್ತದೆ.
©2025 Book Brahma Private Limited.