60-70 ರ ದಶಕದಲ್ಲಿ ಪತ್ತೆದಾರಿ ಕಾದಂಬರಿ ಎನ್. ನರಸಿಂಹಯ್ಯ ಬರೆಯುವುದರಲ್ಲಿ ಮೊದಲಿಗರು. ಇವರ ಕಾದಂಬರಿಗಳ ಪುರುಷೋತ್ತಮ. ಮಧು ಸೂದನ. ಅರಿಂಜಯರಂಥ ಪತ್ತೆದಾರರು ಆಗಿನ ಕಾಲದ ಸಾಮನ್ಯ ಓದುಗರಿಗೆ ಮಾದರಿಯಾಗಿದ್ದರು. ಎನ್. ನರಸಿಂಹಯ್ಯ ಅವರ ಹೆಸರಾಂತ ಪತ್ತೇದಾರಿ ಕಾದಂಬರಿಗಳ ಸಾಲಿನಲ್ಲಿ ಕಣಿವೆಯ ಖದೀಮ ಪ್ರಮುಖ ಸ್ಥಾನ ಪಡೆದಿದೆ. ಕುಪ್ರಸಿದ್ದ ಡಕಾಯಿತನಾದ ರಾಜಸಿಂಹನನ್ನು ಹಿಡಿಯಲು ಸರ್ಕಾರ ನಾನ ರೀತಿಯ ಉಪಾಯ ಮಾಡಿದರೂ ಅವನನ್ನ ಹಾಗು ಆತನ ಸಹಚರರನ್ನು ಹಿಡಿಯಲು ಸಾಕಷ್ಟು ಪ್ರಯತ್ನ ಪಟ್ಟರು ಹಿಡಿಯಲು ಆಗುವುದಿಲ್ಲ. ಸರ್ಕಾರ ಪತ್ತೆದಾರನಾದ ಹರಿಂಜಯನ ಸಹಾಯ ಪಡೆದು ಡಕಾಯಿತ ರಾಜಸಿಂಹನನ್ನು ಹಿಡಿಯಲು ಪ್ರಯತ್ನಿಸಿ ಪೋಲಿಸ್ ಹಾಗೂ ಡಕಾಯಿತರ ನಡುವೆ ಕಾಳಗವಾಗಿ ರಾಜಸಿಂಹ ಸಾವನ್ನಪ್ಪುತ್ತಾನೆ.ಹೀಗೆ ಈ ಕಾದಂಬರಿ ಸಾಗುತ್ತದೆ..
©2025 Book Brahma Private Limited.