ದಿ ಕ್ಯೂರಿಯಸ್ ಕೇಸ್ ಆಫ್ ತಾರಾಗುಪ್ತ

Author : ಕೌಶಿಕ್ ಕೂಡುರಸ್ತೆ

Pages 208

₹ 225.00




Year of Publication: 2024
Published by: ಸ್ನೇಹ ಬುಕ್ ಹೌಸ್
Address: 165, 10ನೇ ಮುಖ್ಯರಸ್ತೆ, ಶ್ರೀನಗರ, ಬೆಂಗಳೂರು - 560050
Phone: 9845031335

Synopsys

`ದಿ ಕ್ಯೂರಿಯಸ್ ಕೇಸ್ ಆಫ್ ತಾರಾಗುಪ್ತ’ ಕೌಶಿಕ್ ಕೂಡುರಸ್ತೆ ಅವರ ಪತ್ತೆದಾರಿ ಕಾದಂಬರಿಯಾಗಿದೆ. ಈ ಕೃತಿಯಲ್ಲಿನ ಮಾತುಗಳು ಹೀಗಿವೆ; ಡಿಯರ್ ಡಿಟೆಕ್ಟಿವ್ ಹಿಮವಂತ್, ನಾನು ಈ ಡೆತ್' ನೋಟನ್ನು ನಿನಗೆ ಕಳಿಸುತ್ತಿರುವ ಹಿಂದೆ ಒಂದು ಪ್ರಮುಖ ಕಾರಣವಿದೆ. ಇತ್ತೀಚಿನ ದಿನಗಳಲ್ಲಿ ನನ್ನ ಬದುಕು ದುಸ್ತರವಾದಂತೆ ನನಗನಿಸುತ್ತಿದೆ. ಜೊತೆಗೆ ನನ್ನ ವೈಯಕ್ತಿಕ ಜೀವನವು ತೀರ ಹದಗೆಟ್ಟು ಹೋಗಿರುವುದರಿಂದ ನನಗೆ ಬದುಕುವ ಆಸಕ್ತಿಯು ಹೊರಟುಹೋಗಿದೆ. ಒಂದಿಷ್ಟು ತಿಂಗಳಿನಿಂದ ಸೀವಿಯರ್ ಡಿಪ್ರೆಶನ್ ನಿಂದ 'ಬಳಲುತ್ತಿದ್ದೇನೆ. ಹಾಗೇಯೇ ಮೂರ್ನಾಲ್ಕು ತಿಂಗಳಿಂದ ಒಂದಕ್ಷರವನ್ನು ಬರೆಯಲಾಗುತ್ತಿಲ್ಲ ಎಂಬ ಕೊರಗು ನನ್ನನ್ನು ಸದಾ ಕಾಡುತ್ತಿದೆ. "ಥ್ರಿಲ್ಲರ್ ಕಾದಂಬರಿಗಾರ್ತಿ ಯಾಗಿ ಸಿಕ್ಕ ಖ್ಯಾತಿಯೆಲ್ಲವೂ ಶೂನ್ಯವೆಂದು ನನಗೀಗ ಅರಿವಾಗುತ್ತಿದೆ. ಒಂದು ವೇಳೆ ನಾನು ಸತ್ತು ಹೋದರೆ, ಅದಕ್ಕೆ ನನ್ನ ಗಂಡ ಮತ್ತು ಅವನೊಟ್ಟಿಗೆ ಅಕ್ರಮ ಸಂಬಂಧವನ್ನು ಹೊಂದಿರುವ 'ಚರ್ಚ್ ಸ್ಟ್ರೀಟ್ ನ ಹುಡುಗಿಯು ಕಾರಣವಾಗಿರುತ್ತಾರೆ. ಇದಲ್ಲದೆ ಸಾಯುವ ಮುನ್ನ ಸಾಕಷ್ಟು ರಹಸ್ಯಗಳನ್ನು ನಿನ್ನೊಂದಿಗೆ ತೆರದಿಡಬೇಕಿದೆ. ಆದ್ದರಿಂದ ಮಧ್ಯರಾತ್ರಿ ಒಂದರ ವೇಳೆಗೆ ನೀನು ನನ್ನನ್ನು ಭೇಟಿಯಾಗಬೇಕು. ಭೇಟಿಯು ರಹಸ್ಯವಾಗಿರುವುದರಿಂದ ಸ್ಥಳವನ್ನು ಕೂಡ ರಹಸ್ಯವಾಗಿರಿಸಿದ್ದೇನೆ. ನೆನಪಿರಲಿ, ಇದೊಂದು ಸೀಕ್ರೆಟ್ ಡೆತ್ ನೋಟ್ !! ನೋವಿನಿಂದ ತಾರಾಗುಪ್ತ

About the Author

ಕೌಶಿಕ್ ಕೂಡುರಸ್ತೆ

ವೃತ್ತಿಯಿಂದ ಸಹಾಯಕ ನಿರ್ದೇಶಕರಾಗಿರುವ ಕೌಶಿಕ್ ಕೂಡುರಸ್ತೆ ಅವರು ಮೂಲತಃ ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಕೂಡುರಸ್ತೆ ಗ್ರಾಮದವರು. ತಂದೆ-ಹೆಚ್.ಎಸ್. ತಮ್ಮೇಗೌಡ, ತಾಯಿ ಭಾಗ್ಯ ಆಚಾರ್ಯ ಇನ್ಸ್ಟಿಟ್ಯೂಟಿನಲ್ಲಿ ಏರೋನಾಟಿಕಲ್ ಇಂಜಿನಿಯರಿಂಗ್ ಪದವಿಯನ್ನು ಪಡೆದಿರುವ ಅವರು ಸಾಹಿತ್ಯ ಕ್ಷೇತ್ರದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ‘ಹೃದಯದ ಮಾತು’ ಇವರ ಮೊದಲ ಪ್ರಕಟಿತ ಕವನ ಸಂಕಲನ. ‘ಇಂತಿ ನಿಮ್ಮ ಆತ್ಮೀಯ’ ಎಂಬ ಕಾದಂಬರಿಯು ಇವರ ಎರಡನೆಯ ಪ್ರಕಟಿತ ಕೃತಿಯಾಗಿದ್ದು ಎರಡನೇ ಮುದ್ರಣವನ್ನು ಕಂಡಿದೆ. ಈ ಕಾದಂಬರಿಯು ‘ಬಹ್ರೇನ್ ಕನ್ನಡ ಡಿಂಡಿಮ’ ಸಮಾರಂಭದಲ್ಲಿ ಪ್ರದರ್ಶನಗೊಂಡಿದೆ. ಗ್ರಿಫಿನ್ಸ್ ಗುರುಕುಲ ಎಂಬ ಸಂಸ್ಥೆಗೆ ಬಿಸಿನೆಸ್ ಕುರಿತಾದ ‘ಬಿಸಿನೆಸ್ ಮತ್ತು ...

READ MORE

Related Books