‘ಸ್ವಪ್ನದ ಬೆನ್ನೇರಿ’ ಲೇಖಕ ಕೌಶಿಕ್ ಕೂಡುರಸ್ತೆ ಅವರ ಪತ್ತೇದಾರಿ ಕಾದಂಬರಿ. ಈ ಕೃತಿಗೆ ಅರ್ಜುನ್ ದೇವಾಲದಕೆರೆ ಅವರ ಬೆನ್ನುಡಿ ಬರಹವಿದೆ. ಮಲೆನಾಡ ಮನೆ ಹುಡುಗ ಕೌಶಿಕ್ ಕೂಡುರಸ್ತೆಯ ಮತ್ತೊಂದು ಪತ್ತೆದಾರಿ ಕಾದಂಬರಿ ನಿಮ್ಮ ಕೈಯಲ್ಲಿದೆ. ಆತ್ಮೀಯ ಎಂಬ ಸತ್ಯಘಟನೆಯಾಧಾರಿತ ಕಾದಂಬರಿಯ ಮೂಲಕ ಕನ್ನಡ ಸಾಹಿತ್ಯ ಲೋಕದ ಕದ ತಟ್ಟಿದ ಕೌಶಿಕ್, ಕಾಲಾಯ ತಸ್ಮೈ ನಮಃ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ಭರ್ಜರಿಯಾಗಿ ಕಾಲೂರಿದ್ದಾನೆ ಎನ್ನುತ್ತಾರೆ ಅರ್ಜುನ್ ದೇವಾಲದಕೆರೆ. ಬೆರಗು ಕಣ್ಗಳ ಈ ಯುವಕನ ಪತ್ತೆದಾರಿ ನಿರೂಪಣಾ ಶೈಲಿಯೇ ವಿಭಿನ್ನ ಮತ್ತು ಆಹ್ಲಾದಕರ.
ಕನ್ನಡದಲ್ಲಿ ಪತ್ತೆದಾರಿ ಕಾದಂಬರಿಗಳೇ ವಿರಳವಾಗುತ್ತಿರುವ ಸಮಯದಲ್ಲಿ ಕೌಶಿಕ್ ಕೂಡುರಸ್ತೆ, ಕನ್ನಡ ಪತ್ತೆದಾರಿ ಕಾದಂಬರಿ ಪ್ರಕಾರದಲ್ಲಿ ಹೊಸ ಭರವಸೆಯೆಂದರೆ ತಪ್ಪಾಗಲಾರದು. ಓದುಗನಾಗಿ ಇವರ ಮೊದಲೆರಡು ಪುಸ್ತಕಗಳನ್ನು ಒಂದೇ ಗುಕ್ಕಿನಲ್ಲಿ ಓದಿಮುಗಿಸಿರುವ ಅನುಭವದ ಮೇಲೆ ಹೇಳುತ್ತೇನೆ. ಖಂಡಿತ ಈ ಕಾದಂಬರಿ ಕೂಡ ನಮ್ಮನ್ನು ಒಂದೇ ಗುಕ್ಕಿಗೆ ನಮ್ಮನ್ನು ಓದಿಸಿಕೊಳ್ಳುತ್ತದೆ ಮತ್ತು ಅಯ್ಯೋ ಇಷ್ಟು ಬೇಗ ಮುಗಿಯಬಾರದಿತ್ತು, ಇನ್ನಷ್ಟಿರಬೇಕಿತ್ತು ಎನಿಸುವುದು ಖಂಡಿತ ಎಂಬ ಭರವಸೆಯ ಮಾತುಗಳನ್ನಾಡಿದ್ದಾರೆ.
©2024 Book Brahma Private Limited.