ಜಾತಿ, ಮತ, ಪಂಥ, ಪಂಗಡ, ವರ್ಣ, ಲಿಂಗಾದಿ ಭೇದಗಳನ್ನು ಅಲ್ಲಗಳೆದು ಶರಣ ಮಾರ್ಗ, ಶರಣ ಕಲ್ಯಾಣವನ್ನು ಬಯಸಿ ಅನುಷ್ಠಾನಗೊಳಿಸಿದ ಶ್ರೇಯಸ್ಸು ಬಸವಾದಿ ಶಿವಶರಣರಿಗೆ ಸಲ್ಲುತ್ತದೆ. ಹಾಗೆ ಸಂದ ಮಹತ್ತರ ವಿಷಯವನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾದ ಸ್ಮರಣ ಸಂಪುಟವೇ ‘ಶರಣ ಕಲ್ಯಾಣ’. ಕಲಬುರ್ಗಿ ಜಿಲ್ಲಾ ಪ್ರಥಮ ಶರಣ ಸಾಹಿತ್ಯ ಸಮ್ಮೇಳನದ ಸವಿನೆನಪಿಗಾಗಿ ಪ್ರಕಟಿಸಿದ್ದು, ಡಾ. ಕಲ್ಯಾಣರಾವ ಜಿ. ಪಾಟೀಲ ಹಾಗೂ ಡಾ. ಈಶ್ವರಯ್ಯ ಮಠ ಸಂಪಾದಕರು.
‘ಶರಣ ಕಲ್ಯಾಣ’ವು ಐದು ಭಾಗಗಳಲ್ಲಿ ರೂಪುಗೊಂಡಿದೆ. ‘ಶರಣರು’ ಮೊದಲ ಭಾಗದಲ್ಲಿ ನುಲಿಯ ಚಂದಯ್ಯ, ಮಗ್ಗೆಯ ಮಾಯಿದೇವ, ದಾಸೋಹದ ಸಂಗಣ್ಣ, ಗಂಗಾಂಬಿಕೆ, ಅಲ್ಲಮಪ್ರಭು, ದಸರಯ್ಯ, ಏಲೇರಿಯ ಅಕ್ಕಮ್ಮ, ಮಹಾದೇವಿಯಕ್ಕ, ಅಂಬಿಗರ ಚೌಡಯ್ಯ, ಅಮುಗೆ ರಾಯಮ್ಮ, ಕೆಂಭಾವಿ ಭೋಗಣ್ಣರಂತಹ ಶರಣ-ಶರಣೆಯರ ಜೀವನ ಪಥ ಮತ್ತು ವಚನ ವಿಶ್ಲೇಷಣೆಯನ್ನು ಮನವರಿಕೆ ಮಾಡಿ ಕೊಡುವ ಲೇಖನಗಳಿವೆ. ಕಲ್ಯಾಣ ಎಂಬ ಭಾಗ ಎರಡರಲ್ಲಿ, ಶರಣರ ಸಮಗ್ರ ಆರ್ಥಿಕ ನೀತಿ, ಸಾಮಾಜಿಕ ಚಿಂತನೆ, ಭೇದ ನಿರಾಕರಣೆ, ವೈಚಾರಿಕ ಆಚರಣೆ, ದಾಂಪತ್ಯ ಜೀವನ, ಕಾಯಕ ದಾಸೋಹಗಳಾದಿ ವಿಚಾರಗಳನ್ನು ತಿಳಿಹೇಳುವ 21 ಮೌಲಿಕ ಲೇಖನಗಳಿವೆ. ಚಿತ್ರಣ ಎಂಬ ಭಾಗ ಮೂರರಲ್ಲಿ, ಜನಪದ ಸಾಹಿತ್ಯದಲ್ಲಿ ಉಲ್ಲೇಖಗೊಂಡ ಬಸವಕಲ್ಯಾಣ ಸಮೀಪದ ಮಾದಾರ ಚೆನ್ನಯ್ಯನಿಗೆ ಸಂಬಂಧಿಸಿದ ಅಂಬಲಿ ಕುಂಡ, ಬಸವಪುರಾಣದಲ್ಲಿ ಚಿತ್ರಿತವಾಗಿರುವ ಮೋಳಿಗೆ ದಂಪತಿಗಳು, ಜನಪದ ಸಾಹಿತ್ಯದಲ್ಲಿ ಶ್ರೀ ಶರಣಬಸವೇಶ್ವರರು, ವಚನ ಮಂಗಳಕ್ಕೆ ಸಂಬಂಧಿಸಿದ ಲೇಖನಗಳಿವೆ. ಸಮ್ಮೇಳನ ಎಂಬ ಭಾಗ 4 ರಲ್ಲಿ, ಸಮ್ಮೇಳನಾಧ್ಯಕ್ಷ ಶ್ರೀಮತಿ ವಿಲಾಸವತಿ ಎಸ್. ಖೂಬಾ ಅವರ ಭಾಷಣ ಮತ್ತು ಅವರ ಜೀವನ ಸಾಧನೆಯ ಮೇಲೆ ಬೆಳಕು ಚೆಲ್ಲುವ ಡಾ. ಜಯಶ್ರೀ ದಂಡೆಯವರ ಲೇಖನವಿದೆ.
©2024 Book Brahma Private Limited.