ಲೇಖಕಿ ಸಂಧ್ಯಾ ಹೊನಗುಂಟಿಕರ್ ಅವರ ಸಂಪಾದಿತ ಕೃತಿ- ʼದಾಸ ದರ್ಪಣ. ಕಲಬುರಗಿ ಜಿಲ್ಲಾ ಪ್ರಥಮ ದಾಸ ಸಾಹಿತ್ಯ ಸಮ್ಮೇಳನದ ಅಂಗವಾಗಿ ಕನ್ನಡ ಸಾಹಿತ್ಯ ಪರಿಷತ್ತು ದಕ್ಷಿಣ ವಿಧಾನಸಭಾ ಕ್ಷೇತ್ರ ಕಲಬುರಗಿ ಹಾಗೂ ಕಲಬುರಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಜಂಟಿಯಾಗಿ ಈ ಕೃತಿ ಪ್ರಕಟಿಸಿವೆ. ಸಾಹಿತಿ ಸ್ವಾಮಿರಾವ್ ಕುಲಕರ್ಣಿ ಅವರು ಪ್ರಧಾನ ಸಂಪಾದಕರು.
ಆಧ್ಯಾತ್ಮವಾದರೂ ಅದನ್ನೂ ಸಾಧಿಸಿಕೊಳ್ಳಲು ಬದುಕಿನೊಂದಿಗೆ ಮುಖಾಮುಖಿಯಾಗಿಸುವ ಮಾರ್ಗವನ್ನು ಇಲ್ಲಿ ಬೋಧಿಸಿದ್ದಾರೆ. ಲೌಕಿಕದ ಮೂಲಕ ಅಲೌಕಿಕದತ್ತ ಸಾಗಲು ಸುಲಭ ಸಾಧ್ಯವಾದ ದಾರಿ ತೋರಿದ್ದಾರೆ. ಈಸಬೇಕು ಇದ್ದು ಜೈಸಬೇಕು ಎಂಬ ಛಲದ ನಡೆಯನ್ನು‘ ಇಟ್ಟಾಂಗ್ಹ ಇರುವೆನೂ ಹರಿಯೆ’ ಎಂದು ಬದುಕು ಬಂದಂತೆ ಸ್ವೀಕರಿಸುವ ಸಕಾರಾತ್ಮಕ ಚಿಂತನೆಯನ್ನೂ ರೂಢಿಸಿಕೊಳ್ಳಲು ಹೇಳಿದ್ದಾರೆ. ದಾಸ ದರ್ಪಣ ಕೃತಿಯು ದಾಸ ಸಾಹಿತ್ಯದಲ್ಲಿಯ ದೇಹ ವಿಜ್ಞಾನ, ಸಂಗೀತ, ಸಾಮಾಜಿಕ ನ್ಯಾಯ, ಭಾವ ಸಂಬಂಧ, ಲೋಕನೀತಿಯಂತಹ ವಿಷಯವನ್ನೊಳಗೊಂಡಂತೆ ಉತ್ತಮ ಮಾಧ್ಯಮವಾಗಿ ಹೇಗೆ ಸಂವಹನ ಕ್ರಿಯೆಯಲ್ಲಿ ದಾಸ ಸಾಹಿತ್ಯ ಜನಮಾನಸವನ್ನು ತಲುಪಿದ ಬಗೆ, ಮತೀಯ ಪ್ರಜ್ಞೆ, ದಲಿತಾನುಕಂಪ ಇತ್ಯಾದಿ ದಾಸರು ತಮ್ಮ ಕೀರ್ತನೆಗಳ ಮೂಲಕ ಹೇಗೆ ಪ್ರತಿಪಾದಿಸಿದ್ದಾರೆ ಎಂಬ ಚಿಂತನೆಯ ಲೇಖನಗಳನ್ನು ಈ ಕೃತಿಯು ಒಳಗೊಂಡಿದೆ.
©2024 Book Brahma Private Limited.