ಗ್ರಾಮೀಣ ಪ್ರದೇಶದ ಜನಜೀವನ ಸುಧಾರಣೆಯಾಗಬೇಕಿದ್ದರೆ ಅದಕ್ಕೆ ಶಿಕ್ಷಣವೇ ಕಾರಣ. ಇಲ್ಲಿನ ಹಿರಿಯರ ಒಗ್ಗಟ್ಟು, ಶೈಕ್ಷಣಿಕ ನಡತೆ ಗಮನಿಸಿದರೆ ಕಿರೇಸೂರು ಒಂದು ಆದರ್ಶ ಗ್ರಾಮವೇ ಸರಿ. ಸರ್ವದಾನಗಳಲ್ಲಿ ಶ್ರೇಷ್ಠ ದಾನ ವಿದ್ಯಾದಾನವೇ ಆಗಿದೆ. ಇಲ್ಲಿಯ ಶಿಕ್ಷಕರು ಅಂತಹ ಶ್ರೇಷ್ಠ ದಾನವನ್ನು ಮಾಡುತ್ತಾ ಮಕ್ಕಳಲ್ಲಿ ನೈತಿಕತೆಯನ್ನು ಬೆಳೆಸುತ್ತಾ ಒಳ್ಳೆಯ ಶಿಕ್ಷಣವನ್ನು ನೀಡುತ್ತಾ ಬಂದಿದ್ದಾರೆ. ಈ ಶಾಲೆಯಲ್ಲಿ ಕಲಿತ ಬಹುತೇಕರು ಸಮಾಜದ ವಿವಿಧ ರಂಗಗಳಲ್ಲಿ ಉತ್ತಮ ಸೇವಾ ಸಲ್ಲಿಸುತ್ತಾ ಗ್ರಾಮದ ಅಭಿವೃದ್ಧಿಗೆ ಕಾರಣರಾಗಿದ್ದಾರೆ. ಈಗ ಈ ಶಿಕ್ಷಣ ಸಂಸ್ಥೆ ಬೆಳ್ಳಿ ವರ್ಷಾಚರಣೆ ಆಚರಿಸಿಕೊಳ್ಳುತ್ತಿರುವುದು ತುಂಬಾ ಸಂತಸದ ಸಂಗತಿ. ಬೆಳ್ಳಿ ಹಬ್ಬದ ವರ್ಷಾಚರಣೆ ಸಂದರ್ಭದಲ್ಲಿ ಶಿಕ್ಷಕ ಸಾಹಿತಿ ಡಾ.ಲಿಂಗರಾಜ ರಾಮಾಪೂರ ಅವರ ಸಂಪಾದಕತ್ವದಲ್ಲಿ ‘ಸಾಲಿಗುಡಿ ಸಂಭ್ರಮ-25’ ಎಂಬ ಸ್ಮರಣಸಂಚಿಕೆಯನ್ನು ಹೊರತರುತ್ತಿರುವುದು ಒಂದು ಮೈಲುಗಲ್ಲು.
©2025 Book Brahma Private Limited.