‘ಪ್ರಮೋದ ಸಂಕಲ್ಪ’ ಕೃತಿಯು ಪ್ರಮೋದಹೆಗಡೆ ಅವರ 70ರ ಅಭಿನಂದನಾ ಗ್ರಂಥವಾಗಿದೆ. ಈ ಕೃತಿಯು ಪ್ರಮೋದ ಹೆಗಡೆ ಅವರ ಕುರಿತ ಹಲವಾರು ವಿಚಾರಗಳನ್ನು ವಿವರಿಸುತ್ತದೆ. ಪ್ರಮೋದ ಹೆಗಡೆಯವರಿಗೆ ಓದುವುದೆಂದರೆ ತುಂಬಾ ಆಸಕ್ತಿ. ಅವರು ತಾವು ಮಾತ್ರ ಓದದೆ ಎಲ್ಲರಿಗೂ ಜ್ಞಾನ ಸಿಗಬೇಕೆಂಬ ಮಹದಾಸೆಯಿಂದ "ಮೌನ ಗ್ರಂಥಾಲಯ" ಸಂಕಲ್ಪದ ಭಾಗವಾಗಿ ಅನೇಕ ಓದುಗರಿಗೆ ನೆರವಾಗಿರುವುದು ವಿಶೇಷ ಎನ್ನುವುದನ್ನು ನಾವು ಇಲ್ಲಿ ಕಾಣಬಹುದು. ಮೌನ ಗ್ರಂಥಾಲಯ ಮೂವತ್ತು ಸಾವಿರ ಪುಸ್ತಕಗಳನ್ನು ಒಳಗೊಂಡ ಗ್ರಂಥಾಲಯ. ಪ್ರಮೋದರಿಗೆ ಜಿಲ್ಲೆಯ ಇಂಚಿಂಚು ಮಾಹಿತಿಗಳು ಗೊತ್ತು. ಅಲ್ಲಿ ವಾಸಿಸುವ ಬುಡಕಟ್ಟು ಜನಾಂಗದ ಹಿನ್ನೆಲೆಗಳ ಅಧ್ಯಯನ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳ ಪರಿಚಯಿಸುವುದರಿಂದ ಪ್ರವಾಸೋದ್ಯಮಕ್ಕೆ ಪೂರಕವಾಗಿ ಸಾಕ್ಷ್ಯ ಚಿತ್ರ ಹಾಗೂ ಪುಸ್ತಕ ಪ್ರಕಟಿಸಿದ್ದಾರೆ ಎನ್ನುತ್ತಾರೆ ಈ ಕೃತಿಯ ಲೇಖಕರು.
©2025 Book Brahma Private Limited.