ಲೇಖಕ ಡಾ.ವಿಜಯಕುಮಾರ ಜಿ ಪರುತೆ ಹಾಗೂ ಶೋಭಾ ರಂಜೋಳಕರ್ ಅವರು ಸಂಪಾದಿಸಿದ "ಧರೆಯ ತೋರಣ"ಸ್ಮರಣ ಸಂಚಿಕೆಯು ಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನದ ಪ್ರಯುಕ್ತ ಬಿಡುಗಡೆಗೊಂಡಿದೆ. ಲೇಖಕಿ ಸರಸ್ವತಿ ಚಿಮ್ಮಲಗಿ ಸಮ್ಮೇಳನ ಸರ್ವಾಧ್ಯಕ್ಷ ರಾಗಿದ್ದರು. ಅಂದಿನ ಕ.ಸಾ.ಪ ಅಧ್ಯಕ್ಷ ಡಾ.ನಲ್ಲೂರ ಪ್ರಸಾದ್ ಆರ್.ಕೆ ನೀಡಿದ ಸಂದೇಶವೂ ಒಳಗೊಂಡಿದೆ. ಕಲಬುರ್ಗಿ ಜಿಲ್ಲೆಯಲ್ಲಿ ಪರಿಷತ್ತು ನಡೆಸುವ"ಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನವು"ಮಹಿಳಾ ಸಂವೇದನೆ ಮತ್ತು ಸಾಹಿತ್ಯವನ್ನು ಬೆಸೆಯುವ ಕೊಂಡಿಯಾಗಿ ಕೆಲಸ ಮಾಡುತ್ತಿದೆ.ಭಾರತೀಯ ಇತಿಹಾಸ ದಲ್ಲಿ ಮಹಿಳೆಗೆ ಸ್ವತಂತ್ರವಾಗಿ ಉಸಿರಾಡಲು ಕಲಿಸಿದ್ದು ಮತ್ತು ಆಕೆಗೆ ಸಮಾನ ಸ್ಥಾನಮಾನ ಕೊಟ್ಟಿದ್ದು ಅವಳ ನೋವಿನ ಧ್ವನಿಯಾದರು ಬಸವಾದಿ ಶರಣರು.ಇಂದು ಮಹಿಳೆ ಎಲ್ಲ ಕ್ಷೇತ್ರಗಳಲ್ಲೂ ಕಾಲಿರಿಸಿದ್ದಾಳೆ. ಹೀಗಿದ್ದೂಸಮಾಜದಲ್ಲಿ ಆಗಾಗ್ಗೆ ಆಕೆಯ ಶೋಷಣೆ ಕೇಳಿ ಬರುತ್ತಿದೆ.ಇದು ನಿಲ್ಲಬೇಕಾದರೆ ಮಹಿಳಾ ಸಬಲೀಕರಣ ಆಗಬೇಕು. ಈ ಸ್ಮರಣ ಸಂಚಿಕೆಯಲ್ಲಿ ಮಹಿಳೆಯರ ಸಮಸ್ಯೆ, ಸಮಾಧಾನ, ಸಬಲೀಕರಣ,ಶಿಕ್ಷಣ, ಸವಾಲು ಗಳು ಕುರಿತು ಲೇಖನಗಳು ಒಳಗೊಂಡಿವೆ’ ಎಂದು ಸಂಪಾದಕರು ಹೇಳಿದ್ದಾರೆ.
©2024 Book Brahma Private Limited.