ಕಲಬುರ್ಗಿ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು 5ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹಮ್ಮಿಕೊಂಡ ಸಂದರ್ಭದಲ್ಲಿ‘ ಕಾಯಕ ಮಾರ್ಗ’ ಎನ್ನುವ ಸ್ಮರಣ ಸಂಚಿಕೆಯನ್ನು ಸಿ.ಎಸ್. ಮಾಲಿಪಾಟೀಲ್, ಡಾ.ಶರಣಬಸಪ್ಪ ವಡ್ದನಕೇರಿ, ಡಾ. ಶಿವಲಿಂಗಪ್ಪ ಬಸವಣ್ಣೋರ ಸಂಪಾದಕತ್ವದಲ್ಲಿ ಪ್ರಕಟಿಸಲಾಗಿದೆ. ಕವಿರಾಜಮಾರ್ಗ ಮತ್ತು ಪರಿಸರ, ಭಾಷೆ ಕಾಯಕ ನಿಷ್ಠೆ ಯಲ್ಲಿ ಆಯ್ದಕ್ಕಿ ಲಕ್ಕಮ್ಮ,ಕನ್ನಡ ಸಾಹಿತ್ಯಕ್ಕೆ ಪ್ರೌಢದೇವರಾಯರ ಕೊಡುಗೆ, ವಚನಕಾರರ ದೃಷ್ಟಿಯಲ್ಲಿ ಸ್ವರ್ಗ-ನರಕ, ಹೊರಳು ದಾರಿಯಲ್ಲಿ ಬಾಲ್ಯದ ನೆನಪುಗಳು, ಆಧುನಿಕ ಸಂದರ್ಭದಲ್ಲಿ ಕೌಟುಂಬಿಕ ಸಂಬಂಧಗಳು, ಶರಣರ ವಚನಗಳಲ್ಲಿ ಸಾಮಾಜಿಕ ಚಿಂತನೆ, ಕನ್ನಡ ಶಾಲೆಗಳ ಕುರಿತು ಕನ್ನಡಿಗರ ಮನಸ್ಥಿತಿ, ಹೈದರಾಬಾದ್-ಕರ್ನಾಟಕ ಸಾಹಿತ್ಯಕ ಒಂದು ನೋಟ, ಸಮ್ಮೇಳನಾಧ್ಯಕ್ಷ ಕಲ್ಯಾಣ ರಾವ್ ಪಾಟೀಲ್ ಅವರ ಬದುಕು-ಬರಹ, ಕುರಿತ ಹಲವಾರು ಲೇಖನಗಳು ಒಳಗೊಂಡಿವೆ.
©2024 Book Brahma Private Limited.