ಲೇಖಕ ಡಾ. ವಿಜಯಕುಮಾರ ಜಿ. ಪರುತೆ ಹಾಗೂ ಬಿ.ಎಸ್. ಬಿರಾದಾರ ಸಂಪಾದಕತ್ವದ ಕೃತಿ-ತಪೋನಿಧಿ. ಶ್ರೀ ಗುರುನಂಜೇಶ್ವರ ಶಿವಯೋಗಿಗಳು ಲಿಂಗೈಕ್ಯರಾದ ದಶಮಾನೋತ್ಸವ ಸ್ಮರಣಾರ್ಥವಾಗಿ ಮೂರ್ತಿ ಪ್ರತಿಷ್ಠಾಪನೆ ಮತ್ತು ಲಕ್ಷ ದೀಪೋತ್ಸವದ ಸ್ಮರಣ ಸಂಚಿಕೆ "ತಪೋನಿಧಿ" ಕೃತಿ ಪ್ರಕಟವಾಗಿದೆ. ಹಂಪಿ ಹೇಮ ಕೂಟದ ಶ್ರೀ ಜಗದ್ಗುರು ಸಂಗನಬಸವ ಸ್ವಾಮಿಗಳು, ಮುಂಡರಗಿ ಸಂಸ್ಥಾನದ ಮಠದ ಶ್ರೀ ಜಗದ್ಗುರು ಅನ್ನದಾನ ಮಹಾಸ್ವಾಮಿಗಳು, ಜೇವರ್ಗಿ ಸಂಸ್ಥಾನ ಮಠದ ಶ್ರೀ ಶಾಂತಲಿಂಗ ಮಹಾಸ್ವಾಮಿಗಳು, ಹುಲಸೂರಿನ ಗುರು ಬಸವೇಶ್ವರ ಸಂಸ್ಥಾನ ಮಠದ ಶ್ರೀ ಶಿವಾನಂದ ಮಹಾಸ್ವಾಮಿಗಳು, ರಟಕಲ್ ಮಠದ ಶ್ರೀ ನೀಲಕಂಠ ಮಹಾಸ್ವಾಮಿಗಳು, ಮಾಜಿ ಪ್ರಧಾನಿ ಶ್ರೀ ಹೆ.ಡಿ.ದೇವೆಗೌಡ,ಮಾಜಿ ಗೃಹ ಸಚಿವ ಎಂ.ಪಿ.ಪ್ರಕಾಶ ಸೇರಿದಂತೆ ಇತರೆ ನಾಯಕ ಗಣ್ಯರು ಶಭ ಕೋರಿದ್ದಾರೆ. ಶ್ರೀ ಮಠದ ಪೂಜ್ಯ ರಾದ ಶ್ರೀ ಚಿಕ್ಕ ಗುರುನಂಜೇಶ್ವರ ಅವರು "ಭರತ ಭೂಮಿಯಲ್ಲಿ ಅನೇಕ ಮಹಾತ್ಮರು,ಶರಣರು, ಸಂತರು ಹಾಗೂ ಶಿವಯೋಗಿಗಳು ಅವತರಿಸಿ,ಆತ್ಮ ಕಲ್ಯಾಣದ ಜೊತೆಗೆ ಸಮಾಜದ ಅಭಿವೃದ್ಧಿಗೆ ತಮ್ಮ ದೇಹವನ್ನು ಜ್ಯೋತಿಯ ತೆರನಾಗಿ ದಹಿಸಿದ್ದಾರೆ.ಅಂಥಹ ಶಿವಯೋಗಿಗಳಲ್ಲಿ ಕಲಬುರ್ಗಿ ಜಿಲ್ಲೆಯ ಕಾಳಗಿ ತಾಲೂಕಿನ ಭರತನೂರಿನ ವಿರಕ್ತಮಠದ ಒಂಬತ್ತನೇ ಪೀಠಾಧಿಪತಿಲಿಂ ಶ್ರೀ ಗುರುನಂಜೇಶ್ವರ ಶಿವಯೋಗಿಗಳು ಒಬ್ಬರು.ಇವರು ತ್ರಿಕಾಲ ಜ್ಞಾನಿಗಳು, ದಾಸೋಹ ಪ್ರೇಮಿಗಳು ತ್ರಿಕಾಲ ಲಿಂಗ ಪೂಜಾ ನಿಷ್ಠರು ಹಾಗೂ ಸಾಮಾಜಿಕ, ಧಾರ್ಮಿಕ ಕಳಕಳಿಯುಳ್ಳ ರಾಗಿದ್ದರು’ ಎಂದು ಹೇಳಿದರೆ, ಲಿಂ. ನಂಜೇಶ್ವರ ಶಿವಯೋಗಿಗಳು ಶ್ರೀ ಮಠದಲ್ಲಿ ಅನ್ನದಾಸೋಹ ದ ಜೊತೆಗೆ ಅಕ್ಷರ ದಾಸೋಹದ ದೀಪ ಬೆಳಗಿದರು.ಅಂದು ಬೆಳಗಿದ ಜ್ಞಾನದ ಜ್ಯೋತಿ ಇಂದು ಅನೇಕ ಜ್ಯೋತಿಗಳಾಗಿ ಬೆಳಕು ಬೀರುತ್ತಿವೆ’ ಎಂದು ಸಂಪಾದಕರು ಹೇಳಿದ್ದಾರೆ. ಶ್ರೀ ಮಠದ ಲಿಂ ಶ್ರೀಗಳ ಕುರಿತು ಕವನಗಳು, ಶ್ರೀ ಮಠದ ಲಿಂ ಶ್ರೀಗಳ ಸಾಹಿತ್ಯ ಲೇಖನಗಳು, ಭಕ್ತಿ ಪರ ಲೇಖನಗಳು, ಲಕ್ಷ ದೀಪ ಬೆಳಗಿದ ದಾನಿಗಳ ಚಿತ್ರ ಗಳು ಕೃತಿಯಲ್ಲಿ ಒಳಗೊಂಡಿವೆ.
©2024 Book Brahma Private Limited.