ಲೇಖಕ ಡಾ.ವಿಜಯಕುಮಾರ ಜಿ ಪರುತೆ ಅವರ ಸಂಪಾದಕತ್ವದ ಸ್ಮರಣ ಸಂಚಿಕೆ-ಹುಳಬಾನ ಬುತ್ತಿ. ಜನಪದ ಸಾಹಿತ್ಯ ಮಾನವ ಜನಾಂಗದಷ್ಟೇ ಪ್ರಾಚೀನ ವಾಗಿದೆ .ಕಾಡಿನಲ್ಲಿ ಅಲೆಯುತ್ತಿರುವ ಮಾನವ ಒಂದೆಡೆ ನೆಲೆ ನಿಂತು ಜೀವನವನ್ನು ಆರಂಭಿಸಿದ್ದಾಗ ತನ್ನ ಸಮುದಾಯದ ಜೊತೆ ಆದ ಅನುಭವದ ಸಂಗತಿಯೇ ಜಾನಪದ ರೂಪದಲ್ಲಿ ಹೊರಹೊಮ್ಮಿತ್ತು..ಜನಪದ ಸಾಹಿತ್ಯ ಜನಪದರ ಸಂಪತ್ತು.ಅವರ ಬದುಕಿನ ನೋವು ನಲಿವುಗಳು ದುಡಿಮೆಯ ಜೊತೆ ಜೊತೆಗೆ ಹಂಚಿಕೊಳ್ಳುವರು. ಇಂದು ವಿಜ್ಞಾನ ಕ್ಷೇತ್ರದಲ್ಲಿ ಅನೇಕ ಸಂಶೋಧನೆಗಳು ನಡೆದು ಪ್ರಪಂಚ ಚಿಕ್ಕದಾಯಿತು.ಹೀಗಾಗಿ ಜನಪದ ಕಲೆಗಳು ಕಾಪಾಡುವುದು ಕೇವಲ ಕರ್ತವ್ಯ ಎನ್ನುವುದು ಮುಗ್ಧ ಅಭಿಮಾನವಾಗಿದೆ. ಜಾಗತೀಕರಣದ ಸಂದರ್ಭದಲ್ಲಿ ಕಲೆ ಸಾಹಿತ್ಯ ಸಂಸ್ಕೃತಿ ಕಾಪಾಡುವುದು ಎಲ್ಲರ ಕರ್ತವ್ಯವಾಗಿದೆ ಎಂದು ಸಂಪಾದಕರು ಅಭಿಪ್ರಾಯಪಟ್ಟಿದ್ದಾರೆ.
ಬಾ.ಬಸವರಾಜ ಪೋಲೀಸ್ ರ: ಜನಪದ ಸಾಹಿತ್ಯ ಮತ್ತು ಶರಣರು, ಡಾ.ಬಸವರಾಜ ಸಬರದರ: ಜನಪದ ಸಂಸ್ಕೃತಿ ಮತ್ತು ಖಾಜಾ ಬಂದೇನವಾಜ,, ಡಾ.ಎಚ್.ಟಿ.ಪೋತೆ: ಜನಪದ ಪ್ರದರ್ಶನ ಕಲೆಗಳ ಸಾಂಸ್ಕೃತಿಕ ಸಂದರ್ಭ, ಡಾ.ಹೋಳಿ ಹಬ್ಬ : ಆಚರಣೆ ಮತ್ತು ಸಂಪ್ರದಾಯ, ಡಾ.ಯಶೋಧಾ ಶಾಸ್ತ್ರಿ: ಜಾನಪದ ಮತ್ತು ದೇವರು, ಡಾ.ನಾಗಾಬಾಯಿ ಬುಳ್ಳಾ: ಅಂಬಿಗರ ಚೌಡಯ್ಯ ಮತ್ತು ಜಾನಪದ ನುಡಿಗಟ್ಟುಗಳು., ಡಾ.ಅಮೃತಾ ಕಟಕೆ: ಜಾನಪದ ಮತ್ತು ರಂಗಭೂಮಿ, ಡಾ.ಶಿವಶರಣಪ್ಪ ಧಾಬಾ: ಜಾನಪದ ಮತ್ತು ಕಾಯಕ, ಡಾ.ನಾಗೇಂದ್ರ ಮಸೂತಿ: ರಜಾಕಾರರ ಹಾವಳಿಯ ಹಾಡು_ಪಾಡು: ಒಂದು ಅವಲೋಕನ, ಡಾ.ಚಿತ್ಕಳ ಮಠ:ಜನಪದ ಸಾಹಿತ್ಯ_ಮಹಿಳೆ ಡಾ.ಶ್ರೀಶೈಲ ನಾಗರಾಳ: ಜನಪದ ಹಾಡು ಮತ್ತು ಗಜೇಶ ಮಸಣಯ್ಯ., ಡಾ.ರಾಜೇಂದ್ರ ಯರನಾಳೆ: ಜೀವನದಿ ಸಾಹಿತ್ಯ.-ಈ ಎಲ್ಲ ವಿಷಯ ವಸ್ತುವುಳ್ಳ ಲೇಖನಗಳು ಒಳಗೊಂಡಿವೆ. ಕೃತಿಯ ಬೆಲೆ ನಮೂದಿಸಿಲ್ಲ.
©2024 Book Brahma Private Limited.