ಒಬ್ಬ ವ್ಯಕ್ತಿಯಾಗಿ, ಒಬ್ಬ ಅಧಿಕಾರಿಯಾಗಿ ಲಕ್ಷ್ಮೀನಾರಾಯಣ ಅವರನ್ನು ಇಲ್ಲಿ ಕಂಡು, ಕಂಡರಿಸಲಾಗಿದೆ. ಮುಖ್ಯವಾದ ಮಾತೆಂದರೆ, ಅವರ ಸ್ವ-ದರ್ಶನವೂ ಇಲ್ಲಿದೆ. ಒಂದು ಕಡೆ ಅವರ ವ್ಯಕ್ತಿತ್ವ, ಇನ್ನೊಂದು ಕಡೆ ಕರ್ತೃತ್ವ ಇಲ್ಲಿನ ಲೇಖನಗಳಲ್ಲಿ ಚಿತ್ರಿತವಾಗಿವೆ. ಒಟ್ಟಿನಲ್ಲಿ ಅವರ ಉಜ್ವಲ ಸಾಧನೆಗೆ ವಿಸ್ಮಯಪೂರ್ವಕವಾಗಿ ತಲೆಬಾಗುವಂತಾಗುತ್ತದೆ. ಗ್ರಂಥಾಲಯ ಸಂಬಂಧವಾದ ತಮ್ಮ ಕಾವ್ಯಕಲಾಪವನ್ನು ತಿಳಿಸುವಲ್ಲಿ ಲಕ್ಷ್ಮೀನಾರಾಯಣ ತಮ್ಮನ್ನು ತಾವು ಕಂಡು, ಎಷ್ಟೋ ಸಂಗತಿಗಳನ್ನು ಆತ್ಮಪ್ರತ್ಯಯ ಪೂರ್ವಕವಾಗಿ, ವಸ್ತುನಿಷ್ಠವಾಗಿ ಹೇಳಿಕೊಂಡಿದ್ದಾರೆ. ಅಲ್ಲಿ ಆತ್ಮಶ್ಲಾಘನೆಯೇನಿಲ್ಲ. ಎಂ. ಮಾದಯ್ಯನವರು, ಪ್ರೊ. ಸಿ. ಡಿ. ನರಸಿಂಹಯ್ಯನವರು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಅವರು ಸಲ್ಲಿಸಿದ ಪ್ರಶಂಸೆಯನ್ನು ಪ್ರಸ್ತಾಪಿಸಿದ್ದಾರೆ. ಒಟ್ಟಿನಲ್ಲಿ 85 ವರ್ಷಗಳ ತುಂಬುಬಾಳು, ಕಾಯಕಭೂಯಿಷ್ಠವಾದ ಸಾರ್ಥಕ ಜೀವಿತ ಲಕ್ಷ್ಮೀನಾರಾಯಣ ಅವರದು, ನಿಸ್ಸಂದೇಹವಾಗಿ, ಈ ಕಾಯಕ ಪವೃತ್ತಿ ನಿವೃತ್ತಿಪೂರ್ವದ್ದೂ ಹೌದು.
©2025 Book Brahma Private Limited.