‘ಸವಿಕಣ್ಣಿ’ ಲೇಖಕ ರಮೇಶ ಎಸ್. ಕತ್ತಿ ಅವರ ಸಂಪಾದಿತ ಸ್ಮರಣ ಸಂಚಿಕೆ. ವಿಜಯಪುರ ಜಿಲ್ಲೆಯ ಆಲಮೇಲ ತಾಲ್ಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಅಂಗವಾಗಿ ಪ್ರಕಟಿಸಲಾದ ಈ ಕೃತಿಯಲ್ಲಿ ‘ಕಡಣಿ’ ಪುಟ್ಟ ಗ್ರಾಮದಲ್ಲಿ ಕನ್ನಡಾಂಬೆಯ ಜಾತ್ರೆಯು ಅದ್ದೂರಿಯಾಗಿ ಜರಗುತ್ತಿರುವ ಹಾಗೂ ಗ್ರಾಮಸ್ಥರ ಸಹಕಾರದ ಚಿತ್ರಣವಿದೆ.
ಸಮ್ಮೇಳನಾಧ್ಯಕ್ಷರ ಭಾಷಣ, ಉದ್ಘಾಟಕರ ಭಾಷಣ, ಆಶಯ ಮಾತು, ಆಲಮೇಲ ತಾಲೂಕಿನ ಸ್ಥಳನಾಮಗಳು ಒಂದು ವಿಶ್ಲೇಷಣೆ, ಆಲಮೇಲ ಗ್ರಾಮದಲ್ಲಿರುವ ವೀರಗಲ್ಲುಗಳು, ಬಿರುನೆಲದ ಸಜ್ಜನ ಬರಹಗಾರ, ಮಹಿಳಾ ಸಾಹಿತ್ಯ: ದಲಿತ ಸಂವೇದನೆ, ಅಲಮೇಲ ತಾಲೂಕಿನ ಸ್ವಾತಂತ್ಯ್ರ ಹೋರಾಟಗಾರರು, ಕಡಣಿಯ ಸಾಹಿತ್ಯ, ಸಂಸ್ಕೃತಿ ಮತ್ತು ಪರಂಪರೆ, ಆಲಮೇಲ ತಾಲೂಕಿನ ಲಲಿತಕಲೆ ಮತ್ತು ಕಲಾವಿದರು, ಜಗದೇವ-ಮಲ್ಲಿಬೊಮ್ಮರ ಜೀವನಗಾಥೆ, ಆಳಮೇಲ ತಾಲೂಕಿನ ಮಾಧ್ಯಮ ಕ್ಷೇತ್ರ, ಮಹಿಳೆ ಮತ್ತು ಅವಕಾಶ, ಆಲಮೇಲ ಪರಿಸರದ ಮಕ್ಕಳ ಸಾಹಿತಿಗಳು, ಕಣ್ಣಿಯ ಭೋಗಣ್ಣ ವೃತ್ತಾಂಶಗಳು ಹೀಗೆ ಒಟ್ಟು 20 ಶೀರ್ಷಿಕೆಗಳನ್ನು ಒಳಗೊಂಡಿದೆ.
©2025 Book Brahma Private Limited.