ಜಾನಪದ ತಜ್ಞ ಡಾ. ಶ್ರೀರಾಮ ಇಟ್ಟಣ್ಣವರ ಅವರು ಸಂಪಾದಿತ ಕೃತಿ ’ಅನುಭಾವ’. ಬೀಳಗಿಯ ಕಲ್ಲಡ್ಕ ಶ್ರೀ ಗುರುಪಾದ ದೇವರ ಪಟ್ಟಾಧಿಕಾರ ಮಹೋತ್ಸವದ ಸಂದರ್ಭದಲ್ಲಿ ಹೊರತಂದ ಸಂಪಾದಿತ ಕೃತಿ ಇದು. ಅನುಭಾವ ಪರಂಪರೆಯಲ್ಲಿ ವಿಶೇಷ ಸಾಧನೆ ಮಾಡಿದ ಒಟ್ಟು 13 ಜನ ಅನುಭಾವಿಗಳ ವಿಚಾರ ಧಾರೆಗಳನ್ನು ವಿದ್ವಜ್ಜನರಿಂದ ಬರೆಯಿಸಿ ಸಂಪಾದಿಸಲಾಗಿದೆ. ಜನಪದರ ಸಾಹಿತ್ಯ, ಕಲೆಗಳಲ್ಲಿ ಅಡಕವಾಗಿರುವ ಅನುಭಾವ ಪರಂಪರೆ ಲೇಖನಗಳೂ ಇಲ್ಲಿವೆ. ಅನುಭಾವ ಪರಿಕಲ್ಪನೆ ಮತ್ತು ಕನ್ನಡ ಸಾಹಿತ್ಯದಲ್ಲಿ ಅನುಭಾವ ಪರಂಪರೆ ಎಂಬೆರಡು ಆರಂಭದ ಲೇಖನಗಳು ಮುಂದಿನ ಲೇಖನಗಳಿಗೆಲ್ಲ ಪ್ರವೇಶಿಕೆಗಳಾಗಿವೆ.
©2025 Book Brahma Private Limited.