‘ಗುರು-ಶಿಷ್ಯರ ಅಪೂರ್ವ ಸಂಗಮ’ ಈ ಕೃತಿಯು ವೈ.ಬಿ. ಕಡಕೋಳ ಅವರ ಪ್ರಧಾನ ಸಂಪಾದಕತ್ವದಲ್ಲಿ ಹಾಗೂ ವೀರಣ್ಣ ಕೊಳಕಿ, ಬಸವನಗೌಡ ಹುಲಗೊಪ್ಪ, ಶಿವಕುಮಾರ ಕಾಟಿ ಹಾಗೂ ಬಸವರಾಜ ತುಳಜಣ್ಣವರ ಸಂಪಾದಕತ್ವದಡಿ ಪ್ರಕಟಗೊಂಡ ಸ್ಮರಣ ಸಂಚಿಕೆ. ಸವದತ್ತಿ ತಾಲೂಕಿನ ಮುನವಳ್ಳಿಯಲ್ಲಿ ಶಿಕ್ಷಣ ಸಂಸ್ಥೆಯನ್ನು ಹುಟ್ಟು ಹಾಕಿ ಜನರು ಹೊಸ ದಿಕ್ಕಿನತ್ತ ವಿಚಾರ ಮಾಡಲು ಪ್ರೇರೇಪಿಸಿದ ಧುರೀಣ ವಿ.ಪಿ. ಜೇವೂರು ಹಾಗೂ ಅವರ ಶಿಷ್ಯರಾಗಿ ಮೂಕ ಹಾಗೂ ಕಿವುಡು ಮಕ್ಕಳ ಶಾಲೆ ತೆರದು ಸಮಾಜ ಸೇವಾನಿರತ ದಿಲೀಪ ಜಂಬಗಿ ಅವರ ಶೈಕ್ಷಣಿಕ ಸೇವೆಯನ್ನು ದಾಖಲಿಸುವ ಪ್ರಯತ್ನವಾಗಿ ಈ ಕೃತಿ ಮೂಡಿಬಂದಿದೆ. ಗುರು-ಶಿಷ್ಯರ ಸಾಮಾಜಿಕ ಕಳಕಳಿಯನ್ನು ಪ್ರಶಂಸಿಸಿದ ಅವರ ಅಭಿಮಾನಿಗಳ, ಒಡನಾಡಿಗಳ ಬರಹ ಹಾಗೂ ಕವನಗಳು ಸ್ಮರಣ ಸಂಚಿಕೆಯಲ್ಲಿವೆ.
©2025 Book Brahma Private Limited.