ಕಲಬುರಗಿ ತಾಲೂಕು ಮೂರನೇಯ ಕನ್ನಡ ಸಾಹಿತ್ಯ ಸಮ್ಮೇಳನದ (ಫರಹತಾಬಾದ) ಅಂಗವಾಗಿ ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿದ ಸ್ಮರಣ ಸಂಚಿಕೆ-ದರ್ಶನ.ಕಲಬುರಗಿ ತಾಲೂಕನ್ನು ಸಮಗ್ರವಾಗಿ ಪರಿಚಯಿಸುತ್ತದೆ. ಸಾಹಿತಿ ಸಂಧ್ಯಾ ಹೊನಗುಂಟಿಕರ್ ಅವರು ಪ್ರಧಾನ ಸಂಪಾದಕರು ಹಾಗೂ ಮಲ್ಲಿನಾಥ ಎಸ್. ತಳವಾರ ಮತ್ತು ಅಪ್ಪಾರಾವ್ ಎಸ್. ಕುಲಕರ್ಣಿ ಅವರು ಸಂಪಾದಕರು.
ಸಂಚಿಕೆಯು 14 ಪರಿವಿಡಿಗಳನ್ನು ಹೊಂದಿದೆ. ಕಲಬುರಗಿಯಲ್ಲಿಯ ವೈಜ್ಞಾನಿಕ ಸಾಧನೆ, ಕಲಾ ಪರಂಪರೆ, ಪ್ರೇಕ್ಷಣೀಯ ಸ್ಥಳಗಳು, ಧಾರ್ಮಿಕ ಕ್ಷೇತ್ರಗಳ ಮಹತ್ವ, ಸಾಹಿತ್ಯ ಆಧಾರಿತ ಅಂಶಗಳು, ಜನರ ಆಚಾರ- ವಿಚಾರಗಳು, ವೈವಿಧ್ಯಮಯವಾದ ವಿಧಿ- ವಿಧಾನಗಳ ಮೇಲೆ ಬೆಳಕು ಚೆಲ್ಲುತ್ತದೆ. ಅಭ್ಯಾಸಿಗಳಿಗೆ, ಸಂಶೋಧಕರಿಗೆ, ಪ್ರವಾಸಿಗರಿಗೆ ಈ ಸಂಚಿಕೆಯು ಆಕರ ಗ್ರಂಥವಾಗಿದೆ ಎಂಬುದು ಸಂಪಾದಕರ ಅಭಿಪ್ರಾಯವಾಗಿದೆ.
©2025 Book Brahma Private Limited.