ಕಲಬುರಗಿ ಜಿಲ್ಲಾ ಐದನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಸಿದ್ಧಪಡಿಸಿದ ಸ್ಮರಣ ಸಂಚಿಕೆ-ದಾಸೋಹ. ಡಾ. ಕಲ್ಯಾಣರಾವ ಜಿ. ಪಾಟೀಲ ಹಾಗೂ ಬಸವ ಪಾಟೀಲ ಜಾವಳಿ ಸಂಪಾದಕರು. ಕಲಬುರಗಿ ಜಿಲ್ಲೆಗೆ ಸಂಬಂಧಿಸಿದ ಇತಿಹಾಸ, ಸಮಾಜ, ಧರ್ಮ ಸಮನ್ವಯ, ಕೋಮು ಸಾಮರಸ್ಯ, ವಚನ ಸಾಹಿತ್ಯ, ಆಧುನಿಕ ವಚನ ಸಾಹಿತ್ಯ, ಆಧುನಿಕ ಸಾಹಿತ್ಯ, ಸಂಸ್ಕೃತಿಗೆ ಸಂಬಂಧಿಸಿದಂತೆ ಇಪ್ಪತ್ತು ವಿದ್ವಾಂಸರು ಮತ್ತು ಯುವ ಬರಹಗಾರರಿಂದ ಲೇಖನಗಳನ್ನು ಬರೆಸಿ ಪ್ರಕಟಿಸಿರುವುದು ಗಮನಾರ್ಹ. ಸಮ್ಮೇಳನಾಧ್ಯಕ್ಷ ಶ್ರೀಮತಿ ಗೀತಾ ನಾಗಭೂಷಣ ಅವರ ಬದುಕು ಬರಹ ಕುರಿತು ಪರಿಚಯದ ಲೇಖನವಿದೆ. ಕೊನೆಯಲ್ಲಿ ಸಮ್ಮೇಳನದ ಸ್ವಾಗತ ಸಮಿತಿಯ ವಿವಿಧ ಸಮಿತಿಗಳ ಯಾದಿ ಮತ್ತು ಲೇಖಕರ ವಿಳಾಸಗಳನ್ನು ಕೊಡಲಾಗಿದೆ. ಸೀಮಿತ ಅವಧಿಯಲ್ಲಿಯೇ ಕಲಬುರಗಿ ಜಿಲ್ಲೆಯ ಬಗೆಗಿನ ಮಹತ್ವಪೂರ್ಣ ಮಾಹಿತಿಗಳನ್ನು ಕಲೆಹಾಕಿರುವುದು ಮತ್ತು ಸಾಂಸ್ಕೃತಿಕ ಸಂಗತಿಗಳನ್ನು ಚಾರಿತ್ರಿಕವಾಗಿ ದಾಖಲಿಸಿರುವುದು ಈ ಕೃತಿಯ ವಿಶೇಷತೆ.
©2025 Book Brahma Private Limited.