ಬಂಗಾಲದ ಹಲವಾರು ಸಂತರ ಪೈಕಿ ಅನುಕೂಲ್ ಚಂದ್ರ ಚಕ್ರವರ್ತಿಯವರು ಕೂಡ ಒಬ್ಬರು. ಇವರ ವಿವಿಧ ಮುಖಗಳನ್ನು, ವಿವಿಧ ಚಿಂತನೆಗಳನ್ನು ಹೌಸರ್ಮನ್ ರು ವಿವಈ ಕೃತಿಯಲ್ಲಿ ವಿವರಿಸಿದ್ದಾರೆ. ಸಂತರಾಗಿ, ವೈದ್ಯರಾಗಿ, ವಿಜ್ಞಾನಿಯಾಗಿ, ದಾರ್ಶನಿಕನಾಗಿ, ಕೈಗಾರಿಕೋದ್ಯಮಿಯಾಗಿ ಹಾಗೂ ಶಿಕ್ಷಣತಜ್ಞನಾಗಿದ್ದ ಒಬ್ಬನೇ ಮನುಷ್ಯನ ಆಲೋಚನಾ ಲಹರಿಗಳು ಹೇಗೆ ಇದ್ದಿರಬಹುದು, ಮತ್ತು ಚಕ್ರವರ್ತಿಯವರ ವಿಚಾರಗಳು ಎಷ್ಟು ಆಳವಾಗಿದ್ದವು ಎಂಬುದನ್ನು ಈ ಕೃತಿಯು ನಮಗೆ ವಿವರಣೆಯನ್ನು ಒದಗಿಸುತ್ತದೆ. ಮದುವೆ ಮತ್ತು ಮೌಲ್ಯಗಳು, ಜೀವವಿಜ್ಞಾನ, ಪ್ರಾಟೆಸ್ಟೆಂಟ್ ಪಂಥ, ಪೋಪ್ ಅವರು ಕ್ರೈಸ್ತರಿಗೆ, ಪ್ರವಾದಿಗಳು ಅವರ ಪಂಥದವರಿಗೆ ಹೇಗೆ ನಂಬಿಕೆಯ ಪ್ರತೀಕವಾಗುತ್ತಾರೆ, ಪ್ರೇಮವು ಹೇಗೆ ಎಲ್ಲಾ ಧರ್ಮದ ಜೀವಾಳವಾಗಿದೆ ಎಂಬುದನ್ನು ತಮ್ಮ ಭಕ್ತರಿಗೆ ಅವರು ಸರಳವಾಗಿ ಇಲ್ಲಿ ಬೋಧಿಸಿದ್ದಾರೆ. ಇದನ್ನು ಕನ್ನಡಕ್ಕೆ ವತ್ಸಲ ಬಂಗಾರ್ ರು ಅನುವಾದ ಮಾಡಿದ್ದಾರೆ.
©2024 Book Brahma Private Limited.