ಕಾದಂಬರಿಕಾರ ವಾಸುದೇವ ಮೂರ್ತಿ ಅವರ ಸಣ್ಣ ಕತೆಗಳ ಸಂಗ್ರಹ ಪಾತಾಳ ಗರಡಿ.ಕೃತಿಯಲ್ಲಿ ಲೇಖಕರ ಮಾತಿನಂತೆ, ಪಾತಾಳ ಗರಡಿ ನನ್ನ ಎರಡನೇ ಪುಸ್ತಕ. ಮೊದಲ ಪುಸ್ತಕ ‘ದಿ ರ‍್ಫೆಕ್ಟ್ ರ‍್ಡರ್’, ಅಪಾರ ಜನ ಮನ್ನಣೆ ಗಳಿಸಿದ ನಂತರ, ಇನ್ನೊಂದು ಪುಸ್ತಕ ನಿಮ್ಮ ಕೈಗಿಡಲು ಮುಂದೆ ಬಂದಿದ್ದೇವೆ. “ಪಾತಾಳ ಗರಡಿ” 7 ವಿಭಿನ್ನ ಥ್ರಿಲ್ಲರ್ ಕಥೆಗಳ ಒಂದು ಗುಚ್ಛ. ಪತ್ತೇದಾರಿ ಕಥೆಗಳು ಅನ್ನುವ ಬದಲು, ಥ್ರಿಲ್ಲರ್ ಕಥೆಗಳು ಅನ್ನುವ ಪದ ಬಳಸಿದ ಉದ್ದೇಶ, ಈ ಕಥಾ ಗುಚ್ಛದಲ್ಲಿ ಇರುವ ಎಲ್ಲಾ ಕಥೆಗಳೂ, ಕೊಲೆ ಮಾಡಿದ ಅಪರಾಧಿಯನ್ನು ಕಂಡುಹಿಡಿಯುವುದು ಎನ್ನುವ ಸೂತ್ರಕ್ಕೆ ಸಂಬಂಧಿಸಿಕೊಂಡಿದ್ದರೂ, ಅದರ ವಾಸ್ತವ, ವಿವರಣೆ ಅಪರಾಧವನ್ನು ಬಿಡಿಸುವ ರೀತಿ, ಅದರಲ್ಲಿ ಬರುವ ಕೆಲವು ತಾಂತ್ರಿಕ ಅಂಶಗಳು ಇದೆಲ್ಲಾ ಒಳಗೊಂಡಿವೆ. ಹಾಗಾಗಿ, ಇವು ಓದುಗನಿಗೆ ಒಂದು ಥ್ರಿಲ್ ಕೊಡುವುದರಲ್ಲಿ ಸಂಶಯವಿಲ್ಲ ಎನ್ನುವುದು ನನ್ನ ಭಾವನೆ. ಉದಾಹರಣೆಗೆ, ‘ಪಾತಾಳ ಗರಡಿ’ ಕಥೆ ಒಂದು ಕೊಲೆಯ ತನಿಖೆಯ ಸುತ್ತಾ ನಡೆದಿದ್ದು, ಅಲ್ಲಿ ಪೊಲೀಸರ ಪಾತ್ರ, ಅವರ ಚಾಣಾಕ್ಷತೆಯ ಸುತ್ತ ಕಥೆ ಹೆಣೆಯಲಾಗಿದೆ. ‘ಅಪರಾಧಿ ನಾನಲ್ಲ’ ಕಥೆಯಲ್ಲಿ, ಕೊಲೆಯ ತನಿಖೆಯೊಂದನ್ನು ಕರ‍್ಟ್ ರೂಂನಲ್ಲಿ ಸಾದರಪಡಿಸಲಾಗಿದೆ. ‘ಛದ್ಮ’ ಕಥೆಯಲ್ಲಿ, ಪೊಲೀಸ್ ಕೂಡಾ ಒಬ್ಬ ಮನುಷ್ಯ, ಅವನಿಗೆ ತನ್ನದೇ ಆದ ದೃಷ್ಟಿಕೋನವಿದ್ದರೂ, ನ್ಯಾಯದ ಮುಂದೆ ಅಸಹಾಯಕ ಎನ್ನುವ ಭಾವನೆಯನ್ನು ಮೂಡಿಸಿ ಚಿಂತನೆಗೆ ಒಳಪಡಿಸಲಾಗಿದೆ. ಹೀಗೆ, ಪ್ರತೀ ಕಥೆಯನ್ನೂ ವಿಭಿನ್ನ ಶೈಲಿಯಲ್ಲಿ ಹೇಳುವ ಪ್ರಯತ್ನ ನಡೆದಿದೆ. ಇಲ್ಲಿ ಬರೆದಿರುವ ಕಥೆಗಳಲ್ಲಿ, ಅಪರಾಧ ಎನ್ನುವ ತಳಹದಿಯಲ್ಲಿ, ಅರಿಷಡ್ರ‍್ಗಗಳಾದ ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ರ‍್ಯದ ಭಾವನೆಗಳೂ ಬೆರೆತುಕೊಂಡಿವೆ. ಈ ಕಥೆಗಳು ನನ್ನ ಕಲ್ಪನೆಯ ಮೂಸೆಯಲ್ಲಿಯೇ ಹುಟ್ಟಿದರೂ, ಎಲ್ಲೋ ಒಂದು ಕಡೆ ನಡೆದ ನೈಜ ಘಟನೆಗಳೂ ಕೂಡ ಈ ಕಥೆಗಳಿಗೆ ಪ್ರೇರಣೆಯಾಗಿವೆ ಎನ್ನುವುದೂ ಸತ್ಯ. ಈ ಪುಸ್ತಕದಲ್ಲಿ ಪ್ರಕಟವಾಗಿರುವ ಎಲ್ಲಾ ಕಥೆಗಳು, ರ‍್ನಾಟಕದ ವಿವಿಧ ಮಾಸಪತ್ರಿಕೆಗಳಾದ, ತರಂಗ, ಮಯೂರ, ಉತ್ಥಾನ ಇತ್ಯಾದಿ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದು ಅನೇಕರ ಮೆಚ್ಚುಗೆಗೆ ಪಾತ್ರವಾಗಿವೆ. ಈ ಕಥೆಗಳನ್ನು ಪುಸ್ತಕ ರೂಪದಲ್ಲಿ ಹೊರತರಲು ಯೋಜಿಸಿದ ಹರಿವು ಬುಕ್ಸ್ ಪ್ರಕಾಶನ ಮತ್ತು ಅವರ ತಂಡಕ್ಕೂ, ಪತ್ತೇದಾರಿ ಕಥೆಗಳನ್ನು ಬರೆಯುವುದಕ್ಕೆ, ಓದಿ, ಪ್ರಕಟಿಸಿ, ಪ್ರೋತ್ಸಾಹಿಸಿದ ಅನೇಕ ಪತ್ರಿಕೆ ಸಂಪಾದಕರಿಗೂ, ನನ್ನ ಕಥೆಗಳನ್ನು ಓದಿ ತಮ್ಮ ಮೆಚ್ಚುಗೆ ವ್ಯಕ್ತಪಡಿಸುತ್ತಾ ಪ್ರೋತ್ಸಾಹಿಸುತ್ತಿರುವ ಓದುಗ ದೊರೆಗಳಿಗೂ ನನ್ನ ಸಪ್ರೇಮ ನಮನಗಳು.
©2024 Book Brahma Private Limited.