ಲೇಖಕಿ ಸಂಯುಕ್ತಾ ಪುಲಿಗಲ್ ಅವರ ’ಆಪರೇಶನ್ ಬೆಳಕಿನ ಕಿಡಿಗಳು’ ಕೃತಿಯು ಪತ್ತೆದಾರಿ ಕಾದಂಬರಿಯಾಗಿದೆ. ಇಲ್ಲಿರುವ ಬರಹವು ಹೊಸತನವನ್ನು ಸೃಷ್ಟಿಸಿದೆ. ಸಂದರ್ಭಕ್ಕೆ ಅನುಗುಣವಾಗಿರುವ ಕತಾನಾಯಕಿಯ ಸಂಭಾಷಣೆ ಕಾದಂಬರಿಯ ನೈಪುಣ್ಯತೆಯನ್ನು ಹೆಚ್ಚಿಸುತ್ತದೆ. ಈ ಕೃತಿಗೆ ಬೆನ್ನುಡಿ ಬರೆದ ಲೇಖಕಿ ಕಾದಂಬರಿಯ ಕೆಲ ತುಣುಕುಗಳನ್ನು ಹೀಗೆ ಬಿಚ್ಚಿಡುತ್ತಾರೆ; ‘ಕಿಟಕಿಯಾಚೆ ನೋಡಿದರೆ ಯಾರೂ ಕಾಣಲಿಲ್ಲ. ಕಿಟಕಿಯ ಮೂಲೆಯಲ್ಲಿ ಒಂದು ಕೆಂಪು ಚೀಟಿ ಕಾಣಿಸಿತು. ಅವಳ ಕೈ ನಡುಗಿತು. ಹೆದರುತ್ತಲೇ ಅದನ್ನು ತೆರೆದು ನೋಡಿದಳು. "ಮಿಸ್ ಜೂನಿಯರ್ ಇಂದಿರಾಗಾಂಧಿ, ಗಾಂಧಿ ತರ ಸುಮ್ಮೆ ಇದ್ರೆ ಸರಿ. ಅದು ಬಿಟ್ಟು ಪತ್ತೇದಾರಿಕೆ ಮಾಡಿದ್ರೆ ಸರಿ ಇರಲ್ಲ. ಇದು ನಿನಗೆ ವಾರ್ನಿಂಗ್!!’ ಎಂದು ಬರೆದಿರುತ್ತದೆ. ಮಾಧುರಿ ತತ್ತರಿಸಿ ಹೋದಳು. ಅವಳ ಮೈ ಬೆವರಲು ಮೊದಲಾಯಿತು. ಮತ್ತೆ ಕಿಟಕಿಯಾಚೆ ನೋಡಿದಳು. ಯಾರೂ ಕಾಣಲಿಲ್ಲ. ಅಲ್ಲೇ ಇದ್ದ ಬಾಟಲಿನ ನೀರು ಕುಡಿದು ಒಂದು ನಿಮಿಷ ಕೂತಳು. ಜೂನಿಯರ್ ಇಂದಿರಾಗಾಂಧಿ ಎಂದು ತನ್ನನ್ನು ಗೇಲಿ ಮಾಡುವುದು ಕಾಲೇಜಿನಲ್ಲಲ್ಲವೇ. ಹಾಗಿದ್ದರೆ ಇದು ಕಿಟ್ಟಿ, ವಿವೇಕ, ತುಳಸಿ, ರಾಜೇಶ ಎಲ್ಲರೂ ಮನಸ್ಸಿನಲ್ಲಿ ಬಂದು ಹಾದು ಹೋದರು. ಕಿಟಿಯ ಜೊತೆಗಿದ್ದ ಆ ಆಗಂತುಕನ ನೆನಪಾಯಿತು. ಎಲ್ಲವೂ ಸೇರಿ ತಲೆ ರಾಡಿಯಾಯಿತು. ಏನೂ ತೋಚದೆ ಹೋಯಿತು. ಹೆದರಿಕೆಯಾಗಿ ಎದೆಬಡಿತ ಕಿವಿಗೆ ಕೇಳುವಂತಾಯಿತು. ಆ ಕೆಂಪು ಚೀಟಿಯನ್ನು ಮತ್ತೆ ಮತ್ತೆ ಓದಿದಳು. ತಮ್ಮ ಪತ್ತೇದಾರಿಕೆಯ ಹಿಂದೆ ಯಾವುದೋ ದೊಡ್ಡ ಜಾಲವೇ ಅಡಗಿದೆ ಎಂಬುದು ಮನದಟ್ಟಾಯಿತು’ ಬರಹದ ಶೈಲಿ ಕುತೂಹಲ ಸೃಷ್ಟಿಸುತ್ತದೆ.
©2024 Book Brahma Private Limited.